ಪತ್ನಿಯ ಮೇಲೆ ಅನುಮಾನ ಪಡುವ ಅಳಿಯ ಅತ್ತೆಗೆ ಮಾಡಿದ್ದೇನು

ಶನಿವಾರ, 7 ನವೆಂಬರ್ 2020 (06:12 IST)
ನಾಗ್ಪುರ : ತನ್ನ ಮನೆಯಲ್ಲಿ ಉಳಿದುಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದ 70 ವರ್ಷದ ಅತ್ತೆಯನ್ನು ಅಳಿಯ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಥಳಿಸಿದ ಘಟನೆ ಮಂಕಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶ್ರೀಕೃಷ್ಣ ನಗರದಲ್ಲಿ ನಡೆದಿದೆ.

ಆರೋಪಿಯನ್ನು 52 ವರ್ಷದ ದಿಲೀಪ್ ಬುಕ್ನೆ ಎಂದು ಗುರುತಿಸಲಾಗಿದೆ. ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯ ಬಗ್ಗೆ  ಆರೋಪಿ ಅನುಮಾನ ಪಡುತ್ತಿದ್ದ. ಇದರಿಂದ ಅವರ ಮಧ್ಯ ಯಾವಾಗಲೂ ಜಗಳವಾಗುತ್ತಿತ್ತು. ಹಾಗಾಗಿ ಬೇಸತ್ತ ಅತ್ತೆ ಆರೋಪಿಗೆ ಮನೆಯಲ್ಲಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಕ್ರಕೆಟ್ ಬ್ಯಾಟ್ ತುಂಡಾಗುವ ತನಕ ಅತ್ತೆಗೆ ಹೊಡೆದಿದ್ದಾನೆ, ತಡೆಯಲು ಬಂದ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾನೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಮಂಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ