ವಾಟ್! ರೈತರ ಆತ್ಮಹತ್ಯೆಗೆ ದೆವ್ವಗಳೇ ಕಾರಣವೆಂದ ಮಧ್ಯಪ್ರದೇಶ ಸರಕಾರ

ಗುರುವಾರ, 21 ಜುಲೈ 2016 (12:00 IST)
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತವರು ಜಿಲ್ಲೆ ಸೆಹೋರ್‌ನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 418 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ರೈತರು ಆತ್ಮಹತ್ಯೆಗೆ ಶರಣಾಗಲು ದೆವ್ವಗಳು ಕಾರಣವಾಗಿವೆ ಎಂದು ಸರಕಾರ ಹೇಳಿಕೆ ನೀಡಿದೆ.
 
ಆತ್ಮಹತ್ಯೆಗೆ ಶರಣಾದ ರೈತರ ಸಂಬಂಧಿಗಳು ತಮ್ಮ ಸಂಬಂಧಿಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿವೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.
 
ಕಾಂಗ್ರೆಸ್ ಶಾಸಕ ಶೈಲೇಂದ್ರ ಪಟೇಲ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಸಚಿವ ಭೂಪೇಂದ್ರ ಸಿಂಗ್, ರೈತರ ಆತ್ಮಹತ್ಯೆಗೆ ದೆವ್ವಗಳು ಕಾರಣವೇ ಹೊರತು ಆರ್ಥಿಕ ಬಿಕ್ಕಟ್ಟಲ್ಲ ಎಂದು ಹೇಳಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಯಾವೊಬ್ಬ ರೈತನು ಹಣಕಾಸಿನ ಬಿಕ್ಕಟ್ಟಿನಿಂದ ಸಾವನ್ನಪ್ಪಿಲ್ಲ. ರೈತರ ಆತ್ಮಹತ್ಯೆಗೆ ದೆವ್ವಗಳು ಕಾರಣವಾಗಿವೆ ಎನ್ನುವುದು ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳ ಅನಿಸಿಕೆಯಾಗಿವೆ ಎಂದು ತಿಳಿಸಿದ್ದಾರೆ.
 
ಗೃಹ ಸಚಿವ ಭೂಪೇಂದ್ರ ಸಿಂಗ್ ಉತ್ತರದಿಂದ ಆಘಾತಗೊಂಡ ಕಾಂಗ್ರೆಸ್ ಶಾಸಕ ಪಟೇಲ್, ನಿಮ್ಮ ಸರಕಾರ ದೆವ್ವಗಳನ್ನು ನಂಬುತ್ತದೆಯೇ ಎಂದು ತಿರುಗೇಟು ನೀಡಿದರು.
 
ಸದನ ನಗೆಗಡಲಲ್ಲಿ ಮುಳುಗಿರುವಂತೆಯೇ ಬಿಜೆಪಿ ಶಾಸಕ ಬಾಬುಲಾಲ್ ಗೌರ್, ದೆವ್ವಗಳನ್ನು ನಂಬುವಂತಹ ಸರಕಾರ ಹ್ಯಾಪಿನೆಸ್ ಡಿಪಾರ್ಟ್‌ಮೆಂಟ್ ತೆರೆಯಲು ಸಿದ್ದತೆ ನಡೆಸಿದೆ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಇತ್ತೀಚೆಗೆ ಹ್ಯಾಪಿನೆಸ್ ಡಿಪಾರ್ಟ್‌ಮೆಂಟ್ ಸೃಷ್ಟಿಸುವ ಕುರಿತಂತೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ