ಅನೈತಿಕ ಸಂಬಂಧ ಬೆಳೆಸಿದ ಮಹಿಳೆ 500ರೂ ಕೇಳಿದ್ದಕ್ಕೆ ಆಗಿದ್ದೇನು?

ಶುಕ್ರವಾರ, 13 ಡಿಸೆಂಬರ್ 2019 (06:27 IST)
ರಾಯ್ ಪುರ : ವ್ಯಕ್ತಿಯೊಬ್ಬ ಅನೈತಿಕ ಸಂಬಂಧ ಬೆಳೆಸಿದ ಮಹಿಳೆ 500ರೂ ಕೇಳಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದ ಘಟನೆ ಛತ್ತಿಸ್ ಗಢದ ಕೊರ್ಬಾದಲ್ಲಿ ನಡೆದಿದೆ.ಚಂದ್ರವಿಜಯ್ ಕೊಲೆ ಮಾಡಿದ ಆರೋಪಿ, ಇಂದ್ರ ದೇವಿ ಭಾರದ್ವಾಜ್(40) ಕೊಲೆಯಾದ ಮಹಿಳೆ. ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಚಂದ್ರವಿಜಯ್ ಜೊತೆ ಸಂಬಂಧ ಬೆಳೆಸಿದ ಮಹಿಳೆ ತನಗೆ 500ರೂ ಕೊಡುವಂತೆ ಕೇಳಿದ್ದಾಳೆ. ಆತ ಹಣ ಕೊಡಲು ನಿರಾಕರಿಸಿದಾಗ ಮಹಿಳೆ ಜೋರಾಗ ಕಿರುಚಾಡಿದ್ದಾಳೆ, ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಆಗ ಆತ ಕೋಪದಿಂದ ಆಕೆಯ ಕತ್ತುಹಿಸುಕಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.


ಇತ್ತ ಮಹಿಳೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ಆತ ನಿಜಾಂಶ ಬಾಯ್ಬಿಟ್ಟಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ