ಪಾಕಿಸ್ತಾನ ಪರ ಇದ್ದವನಿಗೆ ಎಂಥಾ ಗತಿ ಬಂತು?
ಸಾಮಾಜಿಕ ಜಾಲತಾಣದಲ್ಲಿ ಐ ಸಪೋರ್ಟ್ ಪಾಕಿಸ್ತಾನ ಎಂದ ವ್ಯಕ್ತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪಾಕಿಸ್ತಾನದ ಆರ್ಮಿ ಪರ ಬ್ಯಾಟಿಂಗ್ ಮಾಡಿದ್ದ ವ್ಯಕ್ತಿಯ ಪರ ವಕಾಲತ್ತು ಮಾಡದಿರಲು ವಕೀಲರು ನಿರ್ಧಾರ ಮಾಡಿದ್ದಾರೆ.
ಪಾಕಿಸ್ತಾನದ ಸೈನ್ಯದ ಪರ ಸ್ಟೇಟಸ್ ಹಾಕಿದ ಹಿನ್ನಲೆಯಲ್ಲಿ ಸ್ಟೇಟಸ್ ಹಾಕಿದ್ದ ಮೆಬೂಬ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೆಹಬೂಬ್ ಪರ ವಕಾಲತ್ತು ಮಾಡದಿರಲು ವಕೀಲರು ತೀರ್ಮಾನ ಮಾಡಿದ್ದಾರೆ.
ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ವಕೀಲರ ಸಂಘ ಈ ತೀರ್ಮಾನ ಕೈಗೊಂಡಿದೆ. ಈಗಾಗಲೇ ಮೆಹಬೂಬ್ ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ವ್ಯತಿರಿಕ್ತ ಪೋಸ್ಟ್ ಹಾಕಿದ್ದ ಹೊಳಲು ಗ್ರಾಮದ ಮೆಬೂಮ್ ಮುಜಾವರನ ವಿರುದ್ಧ
124, A ಹಾಗೂ 153 B ಕಲಂ ಅಡಿ ದೂರು ದಾಖಲು ಮಾಡಲಾಗಿದೆ.