Mock Drill: ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ ಇಲ್ಲಿದೆ ವಿವರ

Krishnaveni K

ಬುಧವಾರ, 7 ಮೇ 2025 (09:05 IST)
ಬೆಂಗಳೂರು: ಪಾಕಿಸ್ತಾನದ ಜೊತೆ ಯುದ್ಧಕ್ಕೆ ಭಾರತ ಒಂದೊಂದೇ ತಯಾರಿ ಮಾಡಿಕೊಳ್ಳುತ್ತಿದೆ. ಇಂದು ದೇಶದಾದ್ಯಂತ ಮಾಕ್ ಡ್ರಿಲ್ ಗೆ ಕೇಂದ್ರ ಗೃಹ ಇಲಾಖೆ ಕರೆ ಕೊಟ್ಟಿದೆ. ಮಾಕ್ ಡ್ರಿಲ್ ವೇಳೆ ಏನೆಲ್ಲಾ ಚಟುವಟಿಕೆ ಮಾಡಬೇಕು ಇಲ್ಲಿದೆ ವಿವರ.

ಒಂದು ವೇಳೆ ಯುದ್ಧವಾದರೆ, ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕು, ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ.

ಮಾಕ್ ಡ್ರಿಲ್ ನಲ್ಲಿ ಏನೆಲ್ಲಾ ನಡೆಯುತ್ತದೆ?
ಇಂದಿನ ಯುವ ಪೀಳಿಗೆಗೆ ಯುದ್ಧದ ಸಂದರ್ಭವನ್ನು ಎದುರಿಸಿ ಗೊತ್ತಿಲ್ಲ. ಈ ಕಾರಣಕ್ಕೆ ಅಂತಹ ಪರಿಸ್ಥಿತಿಗೆ ಒಗ್ಗಿಕೊಳ್ಳಲು ತರಬೇತಿ ನೀಡಲಾಗುತ್ತದೆ.
ವಾಯುದಾಳಿ ಸೈರನ್: ಯುದ್ಧದ ವೇಳೆ ವಾಯು ದಾಳಿಯಾದರೆ ಯಾವ ರೀತಿ ಸೈರನ್ ಮೊಳಗುತ್ತದೆ, ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತೋರಿಸಲಾಗುತ್ತದೆ.
ರಕ್ಷಣೆ ಮಾಹಿತಿ: ಪ್ರತಿಕೂಲ ಸಂದರ್ಭಗಳಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿ.
ವಿದ್ಯುತ್ ದೀಪ ಇರಲ್ಲ: ಯುದ್ಧದ ಸಂದರ್ಭ ವಿದ್ಯುತ್ ಸಂಪರ್ಕ ಬಂದ್ ಆಗುತ್ತದೆ. ಆಗ ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿ.
ರಕ್ಷಣೆ ಮಾಡುವುದು ಹೇಗೆ?: ತುರ್ತು ಸಂದರ್ಭಗಳಲ್ಲಿ ಕಠಿಣ ಸನ್ನಿವೇಶಗಳಲ್ಲಿ ಸಂಕಷ್ಟಕ್ಕೀಡಾದವರನ್ನು ರಕ್ಷಿಸುವುದು ಹೇಗೆ ಎಂದು ಮಾಹಿತಿ ನೀಡಲಾಗುತ್ತದೆ.

ದೇಶದ 244 ಜಿಲ್ಲೆಗಳಲ್ಲಿ ಇಂದು ಯುದ್ಧದ ಕವಾಯತು ನಡೆಸಲಾಗುತ್ತದೆ. ಈ ಮೂಲಕ ದೇಶದ ಜನರನ್ನು ಸಂಕಷ್ಟ ಪರಿಸ್ಥಿತಿ ತಯಾರಿ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ