ರಾಷ್ಟ್ರಪತಿ ಚುನಾವಣೆ ಯಾಕೆ ಮುಖ್ಯ?

ಶುಕ್ರವಾರ, 11 ಮಾರ್ಚ್ 2022 (12:16 IST)
ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಸೋತರೆ ಸರ್ಕಾರಕ್ಕೆ ಹಿನ್ನಡೆ ಎಂದೇ ಭಾವಿಸಲಾಗುತ್ತದೆ.

ಕೇಂದ್ರ ಸರ್ಕಾರದ ಮಸೂದೆಗಳಿಗೆ ಸಹಿ ಹಾಕದೇ ಇದ್ದರೆ ಯೋಜನೆ/ ನಿರ್ಧಾರಗಳು ತಡವಾಗಿ ಜಾರಿಯಾಗಬಹುದು ಅಥವಾ ಜಾರಿ ಆಗದೇ ಇರಬಹುದು. ಹಲವು ಬಾರಿ ಸರ್ಕಾರದ ನಿರ್ಧಾರವನ್ನು ರಾಷ್ಟ್ರಪತಿಗಳು ಪ್ರಶ್ನಿಸುವ ಸಾಧ್ಯತೆ ಇರುತ್ತದೆ.

ಸಂಸತ್ತಿನಲ್ಲೂ ಮಸೂದೆ ಪಾಸ್ ಆದರೂ ರಾಷ್ಟ್ರಪತಿಗಳು ಅಂಕಿತ ಹಾಕದೇ ಇದ್ದರೆ ಸರ್ಕಾರಕ್ಕೆ ಆದ ದೊಡ್ಡ ಮುಜುಗರ ಎಂದೇ ಭಾವಿಸಲಾಗುತ್ತದೆ. 2014ರಲ್ಲಿ ಮೋದಿ ಸರ್ಕಾರ ಅಧಿಕಾರ ಬಂದಾಗ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದರು.

ಈ ಸಂದರ್ಭದಲ್ಲಿ ಹಣಕಾಸಿಗೆ ಸಂಬಂಧಿಸಿದ ವಿಚಾರ ಬಂದಾಗ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರನ್ನು ಹಲವು ಬಾರಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ಕರೆಯಿಸಿ ಸ್ಪಷ್ಟನೆ ಕೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ