ಚುನಾವಣೆ ನಂತರ ಪೆಟ್ರೋಲ್, ಡಿಸೇಲ್ ದರ ಏರಿಕೆ!

ಶುಕ್ರವಾರ, 11 ಮಾರ್ಚ್ 2022 (11:43 IST)
ಬೆಂಗಳೂರು :  ಪೆಟ್ರೋಲ್, ಡಿಸೇಲ್ ದರ ಏರಿಕೆ ಆಗುವ ಸಾದ್ಯತೆ ದಟ್ಟವಾಗಿದೆ.

ಪಂಚರಾಜ್ಯಗಳ ಚುನಾವಣೆ ಘೋಷಣೆ ಆದ ಬಳಿಕ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಆಗಿರಲಿಲ್ಲ. ಇದೀಗ ಚುನಾವಣೆ ಮುಗಿದು ಫಲಿತಾಂಶ ಕೂಡ ಸಿಕ್ಕಾಗಿದೆ. ಇದೀಗ ಕೇಂದ್ರ ತೈಲ ದರವನ್ನು ಹೆಚ್ಚಿಸಲು ಚಿಂತಿಸಿದೆ.

ಕೆಲ ದಿನಗಳಿಂದ ಅಡುಗೆ ಎಣ್ಣೆ ಬೆಲೆ ಏರಿಕೆ ಕಂಡಿದೆ. ಆದರೆ ಪೆಟ್ರೋಲ್, ಡಿಸೇಲ್ ದರ ಮಾತ್ರ ಏರಿಕೆ ಕಂಡಿರಲಿಲ್ಲ. ಆದರೆ ಸದ್ಯದಲ್ಲೇ ಏರಿಕೆ ಕಾಣುವ ಸಾಧ್ಯತೆ ಇದೆ. 

ಒಂದು ಕಡೆ ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದೆ. ಹಾಗಾಗಿ ತೈಲ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದಾಗಿ ಸರ್ಕಾರ ಜನರ ಮೇಲೆ ತೈಲ ಹೊರೆ ಹಾಕಲು ಸಜ್ಜಾಗುತ್ತಿದೆ. ಈವರೆಗೆ ಪಂಚ ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟು ತೈಲ ಬೆಲೆ ಏರಿಕೆ ಆಗಿರಲಿಲ್ಲ. ಚುನಾವಣೆ ಘೋಷಣೆಗೂ ಮುನ್ನಾ ತೈಲ ಬೆಲೆ ಗಗನಕ್ಕೇರಿತ್ತು.

ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಕೆಲ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಪೆಟ್ರೋಲ್ ರೇಟ್ ಲೀಟರ್ಗೆ 100.06 ರೂಪಾಯಿ. ಮತ್ತು ಡಿಸೇಲ್ ಬೆಲೆ ಲೀಟರ್ಗೆ 85.04 ರೂಪಾಯಿ ಇದೆ. ಕೆಲದಿನಗಳಲ್ಲಿ ತೈಲ ಬೆಲೆ 2 ರಿಂದ 3 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ