ಜೀನ್ಸ್ ತೊಡಬೇಡ ಎಂದಿದ್ದಕ್ಕೆ ಗಂಡನ ಕೊಲೆ ಮಾಡಿದ ಹೆಂಡತಿ
ಮಹಿಳೆ ಜೀನ್ಸ್ ತೊಟ್ಟುಕೊಂಡು ಹೊರಗೆ ಹೋಗಿ ಬಂದ ಮೇಲೆ ಗಂಡ-ಹೆಂಡತಿ ನಡುವೆ ಜೀನ್ಸ್ ಪ್ಯಾಂಟ್ ತೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಇದೇ ಸಿಟ್ಟಿನಲ್ಲಿ ಮಹಿಳೆ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಳು. ಗಾಯಗೊಂಡಿದ್ದ ಗಂಡ ಆಸ್ಪತ್ರೆ ಸೇರಿದ್ದ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗಂಡ ಸಾವನ್ನಪ್ಪಿದ್ದ. ಪೊಲೀಸರು ಈಗ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.