ಯುವತಿ ಪ್ರೀತಿಸುವ ವಿಚಾರ - ಕೊಲೆಯಲ್ಲಿ ಅಂತ್ಯ

ಶನಿವಾರ, 16 ಜುಲೈ 2022 (16:21 IST)
ಯುವತಿಯ ವಿಚಾರಕ್ಕೆ ಕೊಲೆ ಮಾಡಿದ ಘಟನೆ ಇದೀಗ ಸಿಲಿಕಾನ್‌ ಸಿಟಿಯಲ್ಲಿ ಬೆಳಕಿದೆ ಬಂದಿದ್ದು, ಹಳೆ ಮದ್ರಾಸ್‌ ರಸ್ತೆ ನ್ಯೂ ಬಯ್ಯಪ್ಪನ ಹಳ್ಳಿ ಬಳಿ ನಡೆದಿದೆ.
 
ಪ್ರೀತಿಸುವಂತೆ ಯುವತಿಯನ್ನು ಪದೇ ಪದೇ ಪ್ರಜ್ವಲ್‌ (19 ) ಎಂಬ ಹುಡುಗ ಪೀಡಿಸುತ್ತಿದ್ದ ಈ ಕಾರಣಕ್ಕಾಗಿ ನಿನ್ನೆ ಚಾಕುವಿನಿಂದ ಹಲ್ಲೆಗೈದು ಮೂವರು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಪ್ರಜ್ವಲ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಚಿಕಿತ್ಸೆ ಫಲಕಾರಿಯಾಗದೇ ಇಂದು ಪ್ರಜ್ವಲ್‌ ಸಾವನ್ನಪ್ಪಿದ್ದಾನೆ. ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 
ಕೊಲೆಗೈದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ