ಕಪ್ಪು ಹಣ, ಕಪ್ಪು ಮನಸ್ಸಿನವರ ವಿರುದ್ಧದ ಹೋರಾಟ ನಿರಂತರ: ಪ್ರಧಾನಿ ಮೋದಿ

ಮಂಗಳವಾರ, 27 ಡಿಸೆಂಬರ್ 2016 (15:29 IST)
ಕೇಂದ್ರ ಸರಕಾರದ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಮೋದಿ, ಕಪ್ಪು ಹಣ ಮತ್ತು ಕಪ್ಪು ಮನಸ್ಸಿನವರ ವಿರುದ್ಧದ ಹೋರಾಟ ನಿರಂತರ ಎಂದು ಘೋಷಿಸಿದ್ದಾರೆ.
 
ಡೆಹರಾಡೂನ್‌ನಲ್ಲಿ ಆಯೋಜಿಸಲಾದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನೀವು ಕೇವಲ ನನ್ನನ್ನು ಪ್ರದಾನಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ. ಬದಲಿಗೆ ವಾಚ್‌ಮೆನ್‌ ಆಗಿ ಕೂಡಾ ಆಯ್ಕೆ ಮಾಡಿದ್ದೀರಾ. ಆದರೆ, ನಾನು ಮಾಡುತ್ತಿರುವ ಕೆಲಸ ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು ಲೇವಡಿ ಮಾಡಿದರು
 
ಕಳೆದ ನವೆಂಬರ್ 8 ರಂದು ಹೇರಿದ ನೋಟು ನಿಷೇಧದಿಂದಾಗಿ ಭಯೋತ್ಪಾದನೆ, ಡ್ರಗ್ಸ್, ಮಾನವ ಕಳ್ಳಸಾಗಾಣಿಕೆ, ನಕಲಿ ಹಣದ ಕಳ್ಳಸಾಗಾಣೆಯ ಬೆನ್ನೆಲೆಬು ಮುರಿದಂತಾಗಿದೆ ಎಂದು ತಿಳಿಸಿದ್ದಾರೆ.
 
ಕೇಂದ್ರ ಸರಕಾರದ ಒಂದೇ ಒಂದು ನಡೆಯಿಂದಾಗಿ ಭಯೋತ್ಪಾದನೆ, ಡ್ರಗ್ಸ್, ಮಾನವ ಕಳ್ಳಸಾಗಾಣಿಕೆ, ನಕಲಿ ಹಣದ ಕಳ್ಳಸಾಗಾಣೆ ವಿನಾಶವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ದೇಶದ ಬಹುತೇಕ ಜನ ಪ್ರಾಮಾಣಿಕತೆಯನ್ನು ಬಯಸುತ್ತಾರೆ. ಕೆಲವರು ಮಾತ್ರ ಇಂತಹ ಕೃತ್ಯಗಳಿಗೆ ಬೆಂಬಲ ಸೂಚಿಸುತ್ತಾರೆ. ಕಾನೂನು ವಿರೋಧಿ ಕೆಲಸದಲ್ಲಿ ತೊಡಗಿರುವವರನ್ನು ಮಟ್ಟ ಹಾಕಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ