ನವದೆಹಲಿ : ಎಟಿಎಂ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್ಗಳು ಬಿಗ್ ಶಾಕ್ ನೀಡಿವೆ. ಎಟಿಎಂ ವಿತ್ಡ್ರಾ ಮೇಲೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಬ್ಯಾಂಕ್ಗಳು ಮುಂದಾಗಿವೆ.
ಆಗಸ್ಟ್ 1 ರಿಂದ ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್ಗಳು ನೀಡಿದ ಐದು ಉಚಿತ ಟ್ರಾನ್ಸಾಕ್ಷನ್ಗಿಂತ ಕಡಿಮೆ ಬಾರಿ ಹಣ ಡ್ರಾ ಮಾಡಿಕೊಂಡರೂ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಐದು ಟ್ರಾನ್ಸಾಕ್ಷನ್ಗಳ ಬಳಿಕ ಪ್ರತಿ ವಿತ್ಡ್ರಾಗೆ 17 ರೂಪಾಯಿ, ನಾನ್ ಫೈನಾನ್ಶಿಯಲ್ ಟ್ರಾನ್ಸಾಕ್ಷನ್ಗಳ ಮೇಲೆ 6 ರೂಪಾಯಿ ಶುಲ್ಕವನ್ನು ಬ್ಯಾಂಕ್ಗಳು ವಸೂಲಿ ಮಾಡಲಿವೆ.
ಎಟಿಎಂ ಸ್ಥಾಪನೆ, ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಇದರ ಭಾರವನ್ನು ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಗ್ರಾಹಕರ ಮೇಲೆ ಹಾಕಲು ಬ್ಯಾಂಕ್ಗಳು ಮುಂದಾಗಿವೆ.