ಹಾಸಿಗೆ ಒದ್ದೆ ಮಾಡುತ್ತಿದ್ದ ಮಗುವಿನ ಗುಪ್ತಾಂಗ ಸುಟ್ಟ ಮಹಿಳೆ!
ಈ ಸಂಬಂಧ 40 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಗುವನ್ನು ಆರೋಪಿ ಮಹಿಳೆ ತನ್ನ ಸಂಬಂಧಿಕರಿಂದಲೇ ದತ್ತು ಪಡೆದಿದ್ದಳು. ಆದರೆ ಆಕೆಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಬೆಳಕಿಗೆ ಬಂದಿದೆ.
ಗುಪ್ತಾಂಗವನ್ನು ಸುಟ್ಟು ಗಾಯಗೊಳಿಸಿರುವುದಲ್ಲದೆ, ತಲೆ ಕೂದಲು ಕಿತ್ತು, ಮೈಮೇಲೆ ಉಗುರಿನಿಂದ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಇದೀಗ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆಯ ಮೇಲೆ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.