ಲಿಖಿತ ನೋಟಿಸ್ ಇಲ್ಲದೇ ಆರೋಪಿಯನ್ನು ಠಾಣೆಗೆ ಕರೆದೊಯ್ಯುವಂತಿಲ್ಲ: ಕೋರ್ಟ್
ಆರೋಪಿಯನ್ನು ಠಾಣೆಗೆ ಕರೆದೊಯ್ಯಬೇಕಾದರೆ ಆಯಾ ಠಾಣಾಧಿಕಾರಿಗಳು ಲಿಖಿತವಾಗಿ ಸಮನ್ಸ್ ನೀಡಬೇಕು. ಇಲ್ಲದೇ ಮೌಖಿಕ ಹೇಳಿಕೆ ಮೂಲಕ, ಬೆದರಿಸಿ ಠಾಣೆಗೆ ಕರೆದೊಯ್ದರೆ ಅಪರಾಧವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಆಪಾದಿತನೇ ಆದರೂ ಆತನ ಪ್ರತಿಷ್ಠೆ, ಗೌರವ ಕಾಪಾಡುವುದು ಪೊಲೀಸರ ಕರ್ತವ್ಯವಾಗಿರುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.