ಗ್ಯಾಂಗ್ ರೇಪ್ ಆದ ನೋವಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ

ಶುಕ್ರವಾರ, 6 ಮೇ 2022 (08:40 IST)
ಲಕ್ನೋ: ತನ್ನ ಮೇಲೆ ಗ್ಯಾಂಗ್ ರೇಪ್ ಆದ ನೋವಿನಲ್ಲಿ 15 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಂಬಂಧಿಕರ ಮನೆಗೆ ಹೋಗಿದ್ದಾಗ ಯುವತಿಯನ್ನು ಕಾಮುಕರು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಆಕೆ ಎಷ್ಟು ಹೊತ್ತಾದರೂ ಮನೆಗೆ ಮರಳದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ನಡೆದ ವಿಚಾರವನ್ನು ಯುವತಿ ಮನೆಯವರಿಗೆ ತಿಳಿಸಿದ್ದಳು.

ಆದರೆ ಮನೆಯವರು ಆಕೆಗೆ ಸಾಂತ್ವನಿಸುವುದನ್ನು ಬಿಟ್ಟು ಬೈದಿದ್ದರು. ಇದರಿಂದ ಮನನೊಂದ ಆಕೆ ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾಳೆ. ಇದೀಗ ಪೊಲೀಸರು ಅತ್ಯಾಚಾರವೆಸಗಿ ಆರೋಪಿಗಳ ಪೈಕಿ ಒಬ್ಬಾತನನ್ನು ಸೆರೆಹಿಡಿದಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ