1 ಕೋಟಿ ಆಸ್ತಿಯನ್ನು ರಿಕ್ಷಾವಾಲಾಗೆ ಹಸ್ತಾಂತರಿಸಿದ ಮಹಿಳೆ!
63 ವರ್ಷದ ಮಹಿಳೆ ಮಿನಾಟಿ ಪಟ್ನಾಯಕ್ ತನ್ನ ಮೂರು ಮಹಡಿಯ ಬಂಗಲೆ, ಚಿನ್ನಾಭರಣ, ನಗದು ಸೇರಿದಂತೆ ಸಮಸ್ತ ಆಸ್ತಿಯನ್ನು ತನಗಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಿಕ್ಷಾವಾಲಾನ ಕುಟುಂಬಕ್ಕೆ ಧಾರೆಯೆರೆದಿದ್ದಾಳೆ.
ಕಳೆದ ವರ್ಷ ಮಿನಾಟಿ ಗಂಡ ಕಿಡ್ನಿ ವೈಫಲ್ಯದಿಂದ ತೀರಿಕೊಂಡಿದ್ದರು. ಅವರ ಏಕೈಕ ಪುತ್ರಿಯೂ ಇತ್ತೀಚೆಗೆ ಹೃದಯಾಘಾತದಿಂದ ತೀರಿಕೊಂಡಿದ್ದಳು. ಇಂತಹ ಕಷ್ಟದ ಸಮಯದಲ್ಲಿ ಸಂಬಂಧಿಕರು ಯಾರೂ ಸಹಾಯಕ್ಕೆ ಬರಲಿಲ್ಲ. ಬದಲಾಗಿ ರಿಕ್ಷಾವಾಲನ ಕುಟುಂಬವೇ ಆಕೆಯ ಬೆನ್ನಿಗೆ ನಿಂತಿತ್ತು. ಹೀಗಾಗಿ ತನ್ನೆಲ್ಲಾ ಆಸ್ತಿಯನ್ನು ಆತನಿಗೇ ಹಸ್ತಾಂತರಿಸುತ್ತಿರುವುದಾಗಿ ಮಿನಾಟಿ ಹೇಳಿದ್ದಾರೆ.