ಯುವತಿಯ ಅತ್ಯಾಚಾರ ನಾಟಕಕ್ಕೆ ಪೊಲೀಸರೇ ಬೇಸ್ತು!
ಸೋಮವಾರ ಬೆಳಿಗ್ಗೆ ಯುವತಿ ಕಲಾಮ್ನಾ ಪೊಲೀಸ್ ಠಾಣೆಯ ಪೊಲೀಸರಿಗೆ ಯುವತಿ ಅತ್ಯಾಚಾರ ದೂರು ನೀಡಿದ್ದಳು. ನಾಗ್ಪುರದ ನಿರ್ಜನ ಪ್ರದೇಶವೊಂದರಲ್ಲಿ ಅತ್ಯಾಚಾರ ನಡೆದಿದೆ ಎಂದಿದ್ದಳು.
ಆಕೆಯ ಅಳಲು ಕೇಳಿ ಪೊಲೀಸರು ಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ ದಿನವಿಡೀ ಹುಡುಕಾಟ ನಡೆಸಿದ್ದರು. ಸುಮಾರು 250 ಸಿಸಿಟಿವಿ ಪರಿಶೀಲಿಸಿದರೂ ಆಕೆ ಹೇಳಿದ್ದಕ್ಕೆ ಸಾಕ್ಷ್ಯ ಸಿಗಲಿಲ್ಲ. ಕೊನೆಗೆ ಆಕೆಯನ್ನೇ ವಿಚಾರಣೆಗೊಳಪಡಿಸಿದಾಗ ಪ್ರಿಯಕರನನ್ನು ಮದುವೆಯಾಗಲು ಈ ರೀತಿ ನಾಟಕವಾಡಿದೆ ಎಂದಿದ್ದಾಳೆ. ಇದೀಗ ಆಕೆಯ ಅತ್ಯಾಚಾರದ ನಾಟಕದ ಹಿಂದಿನ ರಹಸ್ಯ ತಿಳಿಯಲು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.