ಬಾರ್ ನಲ್ಲಿ ಡ್ಯಾನ್ಸ್ ಮಾಡಲು ಹೇಳಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆ
ಈಕೆ ಮಾಲ್ ಒಂದರ ಬಾರ್ ನಲ್ಲಿ ಯುವತಿ ಮತ್ತು ಆಕೆಯ ಸಹೋದರಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಬಾರ್ ಮಾಲಿಕ ಆಕೆಗೆ ತನ್ನ ಜೊತೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದ. ಇದು ಆಕೆಗೆ ತೀವ್ರ ನೋವು ತಂದಿತ್ತು.
ಇದರಿಂದಾಗಿ ಆಕೆ ಅದೇ ಬಾರ್ ನ ಕಟ್ಟಡದ ಮೇಲ್ಭಾಗದಿಂದ ಹಾರಿ ಜೀವ ಕಳೆದುಕೊಂಡಿದ್ದಾಳೆ. ಬಾರ್ ಮಾಲಿಕನ ಕಿರುಕುಳದ ಬಗ್ಗೆ ಸಹೋದರಿ ಪೊಲೀಸರಿಗೆ ವಿವರಿಸಿದ್ದಾಳೆ. ಈ ಸಂಬಂಧ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.