ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ ಗ್ಯಾಂಗ್‌ರೇಪ್ ಎಸಗಿದ ದುರುಳರು

ಸೋಮವಾರ, 3 ಅಕ್ಟೋಬರ್ 2016 (14:58 IST)
40 ವರ್ಷ ವಯಸ್ಸಿನ ಮಹಿಳೆಗೆ ಮತ್ತು ಬರಿಸುವ ಔಷಧಿ ಕುಡಿಸಿದ ಇಬ್ಬರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ಸಾರ್ದಾನಾ ಜಿಲ್ಲೆಯಲ್ಲಿ ವರದಿಯಾಗಿದೆ.
 
ಮಹಿಳೆಗೆ ತಂಪು ಪಾನೀಯ ಕುಡಿಯಲು ಆಹ್ವಾನ ನೀಡಿದ ಆರೋಪಿಗಳು ಅದರಲ್ಲಿ ಮತ್ತು ಬರಿಸುವ ಔಷಧಿ ಬೆರಸಿದ್ದಾರೆ. ಪಾನೀಯ ಕುಡಿದ ಮಹಿಳೆ ಪ್ರಜ್ಞೆ ತಪ್ಪಿದಾಗ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಪ್ರಜ್ಞೆ ಮರಳಿದ ನಂತರ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ ಆರೋಪಿಗಳ ವಿರುದ್ಧ ದೂರು ನೀಡಿ, ಕಳೆದ ಶನಿವಾರದಂದು ಕಾರಿನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಒಬ್ಬ ಅಂಕಿತ ಎಂಬಾತ ನನಗೆ ಪರಿಚಿತನಾಗಿದ್ದಾನೆ. ಮಾರ್ಗ ಮಧ್ಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿದ ತಂಪು ಪಾನೀಯ ನೀಡಿದ್ದಾರೆ ಎಂದು ತಿಳಿಸಿದ್ದಾಳೆ. 
 
ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು, ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ ರಸ್ತೆಯ ಬದಿಗೆ ಮಲಗಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. 
 
ಇಬ್ಬರು ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್, ಅಪಹರಣ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ