ಗಂಡನ ಲವ್ವರ್ ರೇಪ್ ಮಾಡಿಸಲು ಗೂಂಡಾಗಳಿಗೆ ಗುತ್ತಿಗೆ ಕೊಟ್ಟ ಮಹಿಳೆ!

ಮಂಗಳವಾರ, 31 ಮೇ 2022 (08:50 IST)
ಹೈದರಾಬಾದ್: ಗಂಡನ ಜೊತೆ ಸಲುಗೆಯಿಂದ ಇದ್ದ ಮಹಿಳೆಯನ್ನು ರೇಪ್ ಮಾಡಿಸಲು ಪತ್ನಿ ಗೂಂಡಾಗಳಿಗೆ ಗುತ್ತಿಗೆ ನೀಡಿದ ಘಟನೆ ನಡೆದಿದೆ.

ಪತಿ ಹಾಗೂ ಮಹಿಳೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಾಗುತ್ತಿದ್ದರು. ಇದಕ್ಕೆ ತಯಾರಿ ನಡೆಸಲು ಮಹಿಳೆ ಆಗಾಗ ಮನೆಗೆ ಭೇಟಿ ನೀಡುತ್ತಿದ್ದಳು. ಇದರಿಂದಾಗಿ ಇಬ್ಬರ ನಡುವೆ ಸಲುಗೆಯಿತ್ತು. ಇದನ್ನು ಸಹಿಸದ ಪತ್ನಿ ಗೂಂಡಾಗಳನ್ನು ಗೊತ್ತು ಮಾಡಿ ಆಕೆ ಮೇಲೆ ಗ್ಯಾಂಗ್ ರೇಪ್ ಮಾಡಿಸಲು ಯೋಜನೆ ರೂಪಿಸಿದ್ದಳು.

 ಮಹಿಳೆಯ ಮನೆಗೇ ನುಗ್ಗಿ ಆಕೆಯ ಮೇಲೆ ದಾಳಿ ಮಾಡಿ ರೇಪ್ ಮಾಡಲು ಯತ್ನಿಸಿದ್ದಾರೆ. ಆದರೆ ಕಿರುಚಿಕೊಂಡಿದ್ದರಿಂದ ನೆರೆಹೊರೆಯವರು, ಪೋಷಕರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಈಗ ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ