ಮದುವೆ ಕಾಗದ ಹಂಚುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ
ಈ ಕೃತ್ಯದ ಹಿಂದೆ ರಾಜಕೀಯ ನಾಯಕರೊಬ್ಬರ ಕೈವಾಡವಿದೆ ಎನ್ನಲಾಗಿದೆ. ಮೂವರು ಕಾಮುಕರು ಕೃತ್ಯವೆಸಗಿದ್ದಾರೆ. ಅಪಹರಿಸಿ, ಅತ್ಯಾಚಾರ ಮಾಡಿದ ಬಳಿಕ ರಾಜಕೀಯ ನಾಯಕರೊಬ್ಬರಿಗೆ ತನ್ನನ್ನು ಮಾರಾಟ ಮಾಡಲಾಯಿತು. ಆತ ಕೆಲವು ದಿನಗಳ ಕಾಲ ಬಂಧನದಲ್ಲಿಟ್ಟುಕೊಂಡು ದೌರ್ಜನ್ಯ ನಡೆಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಬಂಧನದಲ್ಲಿದ್ದಾಗ ಅದು ಹೇಗೋ ಫೋನ್ ಪಡೆದುಕೊಂಡು ಯುವತಿ ಪೋಷಕರಿಗೆ ಕರೆ ಮಾಡಿದ್ದಾಳೆ. ಬಳಿಕ ಆಕೆಯನ್ನು ರಕ್ಷಿಸಲಾಯಿತು.