ತನ್ನ ಮಗನಿಗಿಂತ ಹೆಚ್ಚು ಅಂಕ ಪಡೆದನೆಂದು ಬಾಲಕನನ್ನು ಕೊಂದ ಮಹಿಳೆ
13 ವರ್ಷದ ಬಾಲಕ 8 ನೇ ತರಗತಿಯಲ್ಲಿ ಓದುತ್ತಿದ್ದ. ಆತ ಹೆಚ್ಚು ಅಂಕ ಪಡೆದಿದ್ದಾನೆಂಬ ಕಾರಣಕ್ಕೆ ಪಕ್ಕದ ಮನೆ ಮಹಿಳೆ ವಿಷವುಣಿಸಿದ್ದಾಳೆ. ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.
ಶಾಲೆಯಲ್ಲಿ ಜ್ಯೂಸ್ ನಲ್ಲಿ ವಿಷ ಹಾಕಿ ಬಾಲಕನಿಗೆ ಮಹಿಳೆ ನೀಡಿದ್ದಳು. ಇದನ್ನು ಕುಡಿದ ಬಾಲಕ ಅಸ್ವಸ್ಥಗೊಂಡಿದ್ದ. ಸಿಸಿಟಿವಿ ದೃಶ್ಯಗಳಿಂದ ಮಹಿಳೆಯ ಕುಕೃತ್ಯ ಸಾಬೀತಾಗಿದೆ.