ಸುಕೇಶ್ ಕಳ್ಳಾಟಗಳೆಲ್ಲಾ ಗೊತ್ತಿದ್ದೂ ಸಂಬಂಧವಿಟ್ಟುಕೊಂಡಿದ್ದ ನಟಿ ಜಾಕ್ವೆಲಿನ್

ಗುರುವಾರ, 1 ಸೆಪ್ಟಂಬರ್ 2022 (11:33 IST)
ಮುಂಬೈ: ಇಡಿ ಕೇಸ್ ನಲ್ಲಿ ಸಿಲುಕಿಕೊಂಡಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಮತ್ತೊಂದು ಸುದ್ದಿ ಬಹಿರಂಗವಾಗಿದೆ.

ಜಾಕ್ವೆಲಿನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ಇಡಿ ಅಧಿಕಾರಿಗಳು ಪ್ರಮುಖ ಆರೋಪಿ ಸುಕೇಶ್ ವಂಚನೆಗಳೆಲ್ಲಾ ಗೊತ್ತಿದ್ದರೂ ಜಾಕ್ವೆಲಿನ್ ಆತನ ಜೊತೆ ಸಂಬಂಧವಿಟ್ಟುಕೊಂಡಿದ್ದರು ಎಂದು ವರದಿ ನೀಡಿದ್ದಾರೆ.

200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಪಾತ್ರವೂ ಇದೆ ಎಂದು ಈ ಮೊದಲೇ ಅಧಿಕಾರಿಗಳು ಆರೋಪಿಸಿದ್ದರು. ಸುಕೇಶ್ ಜಾಕ್ವೆಲಿನ್ ಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದ. ಇದರ ಮೂಲ ಯಾವುದು, ಆತ ಏನೆಲ್ಲಾ ಕುಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದೆಲ್ಲಾ ತಿಳಿದೇ ಜಾಕ್ವೆಲಿನ್ ಸಂಬಂಧವಿಟ್ಟುಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡಾ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲುದಾರರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ