ಪುರುಷನ ಬೆತ್ತಲೆ ಚಿತ್ರಗಳನ್ನು ಚಿತ್ರಿಸಿಕೊಂಡು ಬ್ಲ್ಯಾಕ್‌ಮೇಲ್

ಶುಕ್ರವಾರ, 17 ನವೆಂಬರ್ 2023 (12:09 IST)
ದೆಹಲಿಯ ಉತ್ತಮ ನಗರ ಪ್ರದೇಶದಲ್ಲಿರುವ ನಿವಾಸವೊಂದಕ್ಕೆ ವಾಷಿಂಗ್ ಮಷಿನ್ ರಿಪೇರಿಗಾಗಿ ಬಂದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯೊಂದಿಗೆ ಸೆಕ್ಸ್‌ ಸುಖ ನೀಡು ಎಂದು ಮ್ಯಾಕ್ಯಾನಿಕ್‌ಗೆ ಕೋರಿದ್ದಾಳೆ. ಆದರೆ ಆಕೆಯ ಆಹ್ವಾನವನ್ನು ತಿರಸ್ಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ತನ್ನ ಗೆಳೆಯ ಮತ್ತು ಗೆಳತಿಯರ ಬೆಂಬಲದಿಂದ ಅತನ ಬಟ್ಟೆ ಬಿಚ್ಚಿಸಿ ಬೆತ್ತಲೆ ಚಿತ್ರ ತೆಗೆದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ.
 
ಇಲ್ಲಿಯವರೆಗೆ ಮಹಿಳೆಯ ಬೆತ್ತಲೆ ದೃಶ್ಯಗಳನ್ನು ಚಿತ್ರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಅನೇಕ ಉದಾಹರಣೆಗಳಿವೆ. ಆದರೆ, ಇಲ್ಲಿ ಪುರುಷನ ಬೆತ್ತಲೆ ಚಿತ್ರಗಳನ್ನು ಚಿತ್ರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ವಿಚಿತ್ರ ಘಟನೆ ವರದಿಯಾಗಿದೆ.
 
ದೆಹಲಿ ಪೊಲೀಸರು ಆರೋಪಿ ಮಹಿಳೆ ರೇಣುಳನ್ನು ಬಂಧಿಸಿದ್ದು, ಆಕೆಯ ಮೂವರು ಗೆಳೆಯರ ಬಂಧನಕ್ಕೆ ಜಾಲ ಬೀಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪಾನಾಸೋನಿಕ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಂಗ್ ಭಾಗ್‌ವತಿ ಗಾರ್ಡನ್ ಪ್ರದೇಶದ ನಿವಾಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ