ಇಬ್ಬರು ಜತೆ ಸರಸ: ಒಬ್ಬನ ಜತೆ ಸೇರಿ ಇನ್ನೊಬ್ಬನ ಕೊಂದ ಮಹಿಳೆ
2014 ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಉಮಾ, ಯೋಗೇಶ್ ಸಹವಾಸಕ್ಕೆ ಬಿದ್ದಳು. ಎಂಟು ವರ್ಷಗಳಿಂದ ಇವರಿಬ್ಬರ ನಡುವೆ ಸೆಕ್ಸ್ ಸಂಬಂಧವಿತ್ತು. ಆದರೆ ಮದುವೆಯಾಗಲು ಎಷ್ಟೇ ಒತ್ತಾಯ ಮಾಡಿದರೂ ಕೌಟುಂಬಿಕ ಕಾರಣದಿಂದ ಕೆಲವು ದಿನಗಳ ಬಳಿಕ ಮದುವೆಯಾಗೋಣ ಎಂದು ಯೋಗೇಶ್ ಮುಂದೂಡುತ್ತಲೇ ಇದ್ದ. ಆದರೆ ಇದರಿಂದ ಬೇಸತ್ತ ಉಮಾ, ಸುನಿಲ್ ಎಂಬಾತನ ಜತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಈ ನಡುವೆ ಸುನಿಲ್ ಮತ್ತು ಉಮಾ ಜತೆ ಸೇರಿಕೊಂಡು ಯೋಗೇಶ್ ನನ್ನು ಉಪಾಯವಾಗಿ ಒಂದೆಡೆ ಕರೆಸಿಕೊಂಡು ಕತ್ತು ಸೀಳಿ ಕೊಲೆಗೈದಿದ್ದಾರೆ.