ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ

ಭಾನುವಾರ, 30 ಅಕ್ಟೋಬರ್ 2022 (14:37 IST)
ಜೈಪುರ : ವಿಶ್ವದಲ್ಲೇ ಅತೀ ಎತ್ತರದ ಶಿವನ ಪ್ರತಿಮೆ `ವಿಶ್ವಾಸ್ ಸ್ವರೂಪಂ’ ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿ ಅನಾವರಣಗೊಂಡಿದೆ.

ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾದ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಗುಜರಾತ್ನ ಆಧ್ಯಾತ್ಮಿಕ ನಾಯಕ ಮತ್ತು ಧರ್ಮ ಪ್ರಚಾರಕ ಮೊರಾರಿ ಬಾಪು,

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ವಿಧಾನಸಭಾ ಸಭಾಪತಿ ಸಿ.ಪಿ ಜೋಶಿ ಅನಾವರಣಗೊಳಿಸಿದ್ದು, ಬಳಿಕ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.

ಪ್ರತಿಮೆ ಉದ್ಘಾಟನೆಗೊಂಡ ನಂತರ ರಾಜ್ಯದಲ್ಲಿ ಒಂಭತ್ತು ದಿನಗಳ ಕಾಲ ಅಂದರೆ ಅಕ್ಟೋಬರ್ 29 ರಿಂದ ನವೆಂಬರ್ 6ರ ವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂಸ್ಥಾನದ ಟ್ರಸ್ಟಿ ಹಾಗೂ ಮೀರಜ್ ಗ್ರೂಪ್ ಅಧ್ಯಕ್ಷ ಮದನ್ ಪಲಿವಾಲ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ