ಹಿಜಬ್‌ನ್ನು ತಲೆಗೆ ಧರಿಸುತ್ತಾರೆ, ಮನಸ್ಸಿಗಲ್ಲ : ಓವೈಸಿ

ಗುರುವಾರ, 15 ಸೆಪ್ಟಂಬರ್ 2022 (09:18 IST)
ಜೈಪುರ : ಹೆಣ್ಣುಮಕ್ಕಳು ಹಿಜಬ್ನ್ನು ತಲೆಗೆ ಧರಿಸುತ್ತಾರೆ, ಮನಸ್ಸಿಗಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ  ಹೇಳಿದ್ದಾರೆ.

ಹಿಜಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಓವೈಸಿ, ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಸರ್ಕಾರಿ ಶಾಲೆಗಳು ಇತರ ಧಾರ್ಮಿಕ ಚಿಹ್ನೆಗಳನ್ನು ಅನುಮತಿಸಿದರೆ, ಹಿಜಬ್ಗೆ ಏಕೆ ಅವಕಾಶ ಕೊಡಬಾರದು? ಇದು ಮಹಿಳೆಯರ ಹಕ್ಕು ಕೂಡ ಎಂದು ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿ ತೀರ್ಪು ಕುರಿತು ಮಾತನಾಡಿದ ಅವರು, ಆರಾಧನಾ ಸ್ಥಳಗಳ ಕಾಯಿದೆ, 1991 ರ ವಿರುದ್ಧವಾಗಿದೆ. ವ್ಯವಸ್ಥೆಯೊಂದನ್ನು ಅಸ್ಥಿರಗೊಳಿಸುವ ಪ್ರಯತ್ನ ಇದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ