ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು ಎಂದ ಯೋಗಿ ಆದಿತ್ಯನಾಥ್

ಮಂಗಳವಾರ, 27 ನವೆಂಬರ್ 2018 (09:12 IST)
ನವದೆಹಲಿ: ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನಿಸಿ ಉಪಚರಿಸುತ್ತಿದ್ದರು ನಾವು ಗುಂಡು ನೀಡಿ ಪಾಠ ಕಲಿಸುತ್ತಿದ್ದೇವೆ.. ಹೀಗಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೊಂಡಿದ್ದಾರೆ.

ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೇಶದಲ್ಲಿ ಉಗ್ರರ ಉಪಟಳ ತಾರಕಕ್ಕೇರಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಬಿರಿಯಾನಿ ಬೇಕೆಂದು ಕೇಳಿದ್ದ ಎಂದು ಈ ಹಿಂದೆ ನ್ಯಾಯವಾದಿ ಉಜ್ವಲ್ ನಿಕಂ ಹೇಳಿದ್ದರು. ಅದೇ ಹೇಳಿಕೆ ಉಲ್ಲೇಖಿಸಿ ಯೋಗಿ ಈ ರೀತಿ ಟೀಕಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಟೀಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ನಿಕಂ ಆವತ್ತು ನಾನು ಪ್ರಕರಣದ ವಿಚಾರಣೆಗಾಗಿ ಹಾಗೊಂದು ಹೇಳಿಕೆ ನೀಡಿದ್ದೆನಷ್ಟೇ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ