15 ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಿ: ಸಚಿವರಿಗೆ ಯೋಗಿ ಆದಿತ್ಯನಾಥ್ ಸೂಚನೆ

ಸೋಮವಾರ, 20 ಮಾರ್ಚ್ 2017 (08:52 IST)
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್ ಖಡಕ್ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೇ ರಾಜ್ಯದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿರುವ ಆದಿತ್ಯನಾಥ್ ತಮ್ಮ ಸಂಪುಟ ಸದಸ್ಯರಿಗೆ 15 ದಿನಗಳೊಳಗೆ ಆಸ್ತಿ ಘೋಷಣೆಗೆ ಸೂಚಿಸಿದ್ದಾರೆ.
 

ಎಲ್ಲ ಸಚಿವರು ತಮ್ಮ ಆದಾಯ, ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಮಾಹಿತಿಯನ್ನ ಪಕ್ಷ ಮತ್ತು ಸರ್ಕಾರಕ್ಕೆ ನೀಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಸಹಕರಿಸಬೇಕೆಂದು ಸೂಚಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯವಾಕ್ಯದಡಿ ಎಲ್ಲ ಅಭಿವೃದ್ಧಿಗೆ ಶ್ರಮಿಸುವುದಾಗಿ ಯೋಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ