ನಾಯಿಯನ್ನು ಸಾಕಲು ನಿರಾಕರಿಸಿದ ತಂಗಿಗೆ ಅಣ್ಣ ಮಾಡಿದ್ದೇನು ಗೊತ್ತಾ?

ಬುಧವಾರ, 16 ಡಿಸೆಂಬರ್ 2020 (07:19 IST)
ಮೀರತ್ : ನಾಯಿಯನ್ನು ಸಾಕಲು ನಿರಾಕರಿಸಿದ್ದಕ್ಕೆ  25 ವರ್ಷದ ಯುವಕನೊಬ್ಬ ತನ್ನ ತಂಗಿಯನ್ನು ಗುಂಡಿಕ್ಕಿ ಕೊಂದ ಘಟನೆ ಮೀರತ್ನ ಭವನ್ ಪುರದಲ್ಲಿ ನಡೆದಿದೆ.

ಆಶಿಶ್(25) ಕೊಲೆ ಮಾಡಿದ ಅಣ್ಣ, ಪರುಲ್(23) ಮೃತಪಟ್ಟ ತಂಗಿ. ಆರೋಪಿ 2 ಡಜನ್ ನಾಯಿಯನ್ನು ಕರೆತಂದು ತಂಗಿಯ ಬಳಿ ನೋಡಿಕೊಳ್ಳುವಂತೆ ಹೇಳಿದ್ದಾನೆ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದಾಳೆ.  ಇದರಿಂದ ಕೋಪಗೊಂಡ ಆತ ಅವಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. 

ಬಳಿಕ ತನ್ನ ತಂಗಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ