ಗರ್ಲ್ ಫ್ರೆಂಡ್ ತಂದೆಯಿಂದಲೇ ಯುವಕನ ಮೇಲೆ ಗುಂಡಿನ ದಾಳಿ
ಪ್ರೇಯಸಿಯನ್ನು ನೋಡಲು ಹೋಗಿದ್ದಾಗ ಆಕೆಯ ತಂದೆಯ ಕೈಗೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವತಿಯ ತಂದೆ ಗುಂಡಿನ ದಾಳಿ ನಡೆಸಿದ್ದು, ಯುವಕ ಅಲ್ಲಿಯೇ ಸಾವನ್ನಪ್ಪಿದ್ದರೆ, ಯುವತಿಗೂ ಗಾಯಗಳಾಗಿವೆ.
ಇದೀಗ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಯ ತಂದೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.