ಗರ್ಲ್ ಫ್ರೆಂಡ್ ಜೊತೆ ಚೆಲ್ಲಾಟವಾಡುತ್ತಿದ್ದ ಸಿಕ್ಕಿಬಿದ್ದ ಪ್ರಿಯಕರ ಕೊಲೆಯಾದ!

ಗುರುವಾರ, 26 ಮೇ 2022 (08:40 IST)
ಇಂಧೋರ್: ಗರ್ಲ್ ಫ್ರೆಂಡ್ ಜೊತೆ ಪ್ರಣಯದಾಟವಾಡುತ್ತಿದ್ದಾಗ ಸಿಕ್ಕಿಬಿದ್ದ ಪ್ರಿಯಕರ ಆಕೆಯ ಮನೆಯವರಿಂದಲೇ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

21 ವರ್ಷದ ಯುವಕ ಸಾವನ್ನಪ್ಪಿದ್ದವ. ಅನಾಥವಾಗಿ ಬಿದ್ದಿದ್ದ ಯುವಕನ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

ವಿಚಾರಣೆ ನಡೆಸಿದಾಗ ಮೃತ ಯುವಕನಿಗೆ ಈಗಾಗಲೇ ಮದುವೆಯಾಗಿ ಮಗುವೂ ಇತ್ತು. ಆದರೆ ಪತ್ನಿ ಬಿಟ್ಟು ಹೋಗಿದ್ದಳು. ಇದಾದ ಬಳಿಕ ಇನ್ನೊಬ್ಬ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಇದೀಗ ತಮ್ಮ ಮಗಳನ್ನು ಯುವಕನ ಜೊತೆ ನೋಡಿ ರೊಚ್ಚಿಗೆದ್ದ ಮನೆಯವರು ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ