ಲೋಕಸಭೆ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಗೆ ಝಡ್ ಶ್ರೇಣಿ ಭದ್ರತೆ

Sampriya

ಮಂಗಳವಾರ, 9 ಏಪ್ರಿಲ್ 2024 (16:56 IST)
Photo Courtesy X
ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ತಿಂಗಳು ಇರುವಾಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಝಡ್‌ ಶ್ರೇಣಿಯ ಭದ್ರತೆ ನೀಡಲಾಗಿದೆ.

ಇನ್ನೂ ಮೂಲಗಳ ಪ್ರಕಾರ  ಬೆದರಿಕೆಗಳ ಹಿನ್ನೆಲೆ ಕುಮಾರ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ. 2024 ರ ಲೋಕಸಭಾ ಚುನಾವಣೆಯ ಮುಂಚೆಯೇ ಕುಮಾರ್ ಅವರಿಗೆ ಝಡ್‌ ಶ್ರೇಣಿಯ  ಭದ್ರತೆಯನ್ನು ನೀಡಲಾಯಿತು.

ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸುಮಾರು 40-45 ಸಿಬ್ಬಂದಿ ಶೀಘ್ರದಲ್ಲೇ ಅವರಿಗೆ ಭದ್ರತೆಯನ್ನು ನೀಡಲಿದ್ದಾರೆ.

ಕೇಂದ್ರ ಭದ್ರತಾ ಏಜೆನ್ಸಿಗಳು ಸಿದ್ಧಪಡಿಸಿದ  ವರದಿಯಲ್ಲಿ ಬೆದರಿಕೆಯಿರುವುದು ಕಂಡುಬಂದಿದ್ದು, ಅದರ ಅನುಸಾರ ಮುಖ್ಯ ಚುನಾವಣಾ ಆಯುಕ್ತರಿಗೆ ಝಡ್ ಪ್ಲಸ್‌ ಭದ್ರತೆಯನ್ನು ನೀಡಲಾಗಿದೆ.  

ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 19 ರಂದು ಮತದಾನ ಆರಂಭವಾಗಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ.

ಕುಮಾರ್ 1984ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರು ಮೇ 15, 2022 ರಂದು 25 ನೇ CEC ಆಗಿ ಅಧಿಕಾರ ವಹಿಸಿಕೊಂಡರು. ಅವರನ್ನು ಸೆಪ್ಟೆಂಬರ್ 1, 2020 ರಂದು ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ