ವಿದ್ಯಾರ್ಥಿನಿಯರನ್ನು ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಸರ್ಕಾರಿ ಶಿಕ್ಷಕ ಅರೆಸ್ಟ್
ಸೋಮವಾರ, 21 ಡಿಸೆಂಬರ್ 2020 (07:01 IST)
ಜೈಪುರ : ವಿದ್ಯಾರ್ಥಿನಿಯರನ್ನು ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಸರ್ಕಾರಿ ಶಿಕ್ಷಕನನ್ನು ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಶಿಕ್ಷಣ ಅಧಿಕಾರಿಗಳು ಪರಿಶೀಲನೆಗೆಂದು ಶಾಲೆಗೆ ಆಗಮಿಸಿದಾಗ ಬಾಲಕಿಯರು ರಾಜಕೀಯ, ವಿಜ್ಞಾನ ಉಪನ್ಯಾಸಕರಾಗಿದ್ದ ಆರೋಪಿ ಬಾಲಕಿಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು ಮತ್ತು ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಶಿಕ್ಷಣ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.