ಕೋಳಿ ಮಾಂಸ- 2 ಕೆಜಿ ನೀರು- ಕಾಲು ಬಟ್ಟಲು ಮೆಣಸಿನ ಪುಡಿ- 4 ಟೀ ಚಮಚ ಉಪ್ಪು- ಅಗತ್ಯಕ್ಕೆ ತಕ್ಕಷ್ಟು ಅರಶಿನ-ಅರ್ಧ ಟೀ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್-2 ಟೀ ಚಮಚ ಸೋಯಾಸಾಸ್-2 ಟೀ ಚಮಚ ಎಣ್ಣೆ- 6 ಟೇಬಲ್ ಚಮಚ ದೊಡ್ಡ ಈರುಳ್ಳಿ ಕತ್ತರಿಸಿದ್ದು-2 ನಿಂಬೆ ಹಣ್ಣು-1 ಗರಂ ಮಸಾಲ ಪುಡಿ-2 ಚಮಚ
ಪಾಕ ವಿಧಾನ: ತುಂಡರಿಸಿದ ಕೋಳಿ ಮಾಂಸಗಳ ಚೂರುಗಳನ್ನು ಕುಕ್ಕರ್ನಲ್ಲಿ ಹಾಕಿಸಿ ಬೇಯಿಸಿ. ಅರ್ಧ ಬಟ್ಟಲು ನೀರು, ಮೆಣಸಿನ ಪುಡು, ಉಪ್ಪು, ಅರಶಿನ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಸೋಯಾ ಸಾಸ್ ಸೇರಿಸಿ ಕಲಸಿ. ಕೇವಲ 3 ನಿಮಿಷಗಳ ಕಾಲ ಚಿಕನ್ ಬೇಯಿಸಿದ ನಂತರ ಕುಕ್ಕರ್ ಮುಚ್ಚಳ ತೆಗೆದು ನೀರು ಆವಿಯಾಗಲು ಬಿಡಿ. ಪಾತ್ರೆಯೊಂದರಲ್ಲಿ ಎಣ್ಣೆಯನ್ನು ಕಾಯಿಸಿ. ಹೆಚ್ಚಿದ ಈರುಳ್ಳಿ ಹಾಕಿ ತೆಳು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿದ ಕೋಳಿ ತುಂಡುಗಳನ್ನು ಸೇರಿಸಿ ಹುರಿಯಿರಿ. ನಂತರ ನಿಂಬೆರಸ ಮತ್ತು ಗರಂ ಮಸಾಲಪುಡಿ ಸೇರಿಸಿ 2 ನಿಮಿಷ ಕಲಕಿ ಒಲೆ ಮೇಲಿಂದ ತೆಗೆಯಿರಿ.