ಬಾಯಲ್ಲಿ ನೀರೂರಿಸುವ ಕುಂದಾಪುರ ಚಿಕನ್ ಸುಕ್ಕಾ ಮಾಡೋದು ಹೇಗೆ ಗೊತ್ತಾ?

ಶನಿವಾರ, 9 ಡಿಸೆಂಬರ್ 2017 (10:17 IST)
ಕುಂದಾಪುರ: ಚಿಕನ್ ಎಂದಾಗ ಎಲ್ಲರ ಬಾಯಲ್ಲೂ ನೀರು ಬಂದೆ ಬರುತ್ತದೆ. ಚಿಕನ್ ನಿಂದ ಅನೇಕ ರೀತಿಯಾ ಅಡುಗೆಗಳನ್ನು ಮಾಡಬಹುದು. ಅದರಿಂದ ಮಾಡುವ ಎಲ್ಲಾ ಅಡುಗೆಗಳು ರುಚಿ ರುಚಿಯಾಗೆ ಇರುತ್ತದೆ. ಅದರಲ್ಲೂ ಕುಂದಾಪುರದ ಕಡೆ ಮಾಡುವ  ಚಿಕನ್ ಸುಕ್ಕಾ ಸೂಪರಾಗೆ ಇರುತ್ತೆ. ಇದನ್ನು ನೀರುದೋಸೆಯ ಜೊತೆ ತಿಂದರೆ ಸಿಗುವ ಮಜಾವೆ ಬೇರೆ.


ಬೇಕಾಗಿರುವ ಸಾಮಗ್ರಿಗಳು:
ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, ಜೀರಿಗೆ-1ಚಮಚ, ಮೆಂತ್ಯಕಾಳು,ಸಾಸಿವೆ-1/4 ಚಮಚ, ಬ್ಯಾಡಗಿ ಮೆಣಸು-12, ಈರುಳ್ಳಿ-2, ಬೆಳ್ಳುಳ್ಳಿ-15 ಎಸಳು, ಟೊಮೊಮೊ-2, ಹಸಿಮೆಣಸಿನಕಾಯಿ-3, ತುಪ್ಪ(ಎಣ್ಣೆ)-1/2 ಕಪ್, ಗರಮಸಾಲ-2 ಚಮಚ,  ಶುಂಠಿ ಬೆಳ್ಳುಳ್ಳಿ ಪೇಸ್ಟ್-2ಚಮಚ, ಕರಿಬೇವು. ಅರಶಿನ-1/2 ಚಮಚ. ಚಿಕ್ಕನ-500ಗ್ರಾಂ, ಉಪ್ಪು, ತೆಂಗಿನತುರಿ-1ಕಪ್.


ಮಾಡುವ ವಿಧಾನ:
ಮೊದಲು ಸುಕ್ಕದ ಪುಡಿ ತಯಾರಿಸಿಕೊಳ್ಳಬೇಕು-ಬಾಣಲೆಯಲ್ಲಿ ದನಿಯಾ, ಮೆಣಸಿನಕಾಳು, , ಮೆಂತ್ಯಕಾಳು, ಸಾಸಿವೆ ಇವುಗಳನ್ನು ಬೇರೆ, ಬೇರೆಯಾಗಿ  ಸಣ್ಣ ಉರಿಯಲ್ಲಿ ಹುರಿಯಿರಿ. ಬ್ಯಾಡಗಿ ಮೆಣಸು ಹಾಗು ಕರಿಬೇವನ್ನು ಸ್ವಲ್ಪ ಎಣ್ಣೆ ಹಾಕಿ ಬೇರೆ, ಬೇರೆಯಾಗಿ ಹುರಿಯಿರಿ. ನಂತರ ಇವುಗಳನ್ನುಜೊತೆಗೆ ಜೀರಿಗೆ ಸೇರಿಸಿ ಮಿಕ್ಸಿಯಲ್ಲಿ ಸಣ್ಣಗೆ ಪುಡಿಮಾಡಿ. ನಂತರ ಅದಕ್ಕೆ ಬೆಳ್ಳುಳ್ಳಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.


ಒಂದು ಬಾಣಲೆಯಲ್ಲಿ ತುಪ್ಪ(ಎಣ್ಣೆ) ಬಿಸಿ ಮಾಡಿ, ಅದು ಬಿಸಿಯಾದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಇದಕ್ಕೆ ಹಸಿಮೇಣಸಿನಕಾಯಿ, ಹೆಚ್ಚಿಟ್ಟ ಈರುಳ್ಳಿ ಹಾಕಿ ಕೆಂಪಾಗುವವರೆಗೂ ಹುರಿಯಿರಿ, ಆಮೇಲೆ ಟೊಮೊಮೊ ಹಾಕಿ 2 ನಿಮಿಷ ಹುರಿದು ಅದಕ್ಕೆ ಚಕ್ಕೆ, ಅರಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ 20ನಿಮಿಷ ಬೇಯಿಸಿ. ಬೆಂದ ನಂತರ ಅದಕ್ಕೆ ತೆಂಗಿನತುರಿ, ಸುಕ್ಕದ ಪುಡಿ ಹಾಕಿ, ಗರಂಮಸಾಲ ಹಾಕಿ ಮಿಕ್ಸ್ ಮಾಡಿ, ಉಪ್ಪು ಬೇಕಾದಲ್ಲಿ ಹಾಕಿಕೊಳ್ಳಬಹುದು  ಮತ್ತೆ 5ನಿಮಿಷ ಬೇಯಿಸಿದಾಗ ಕುಂದಾಪುರ ಚಿಕನ್ ಸುಕ್ಕಾ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ