ಚಾಣಾಕ್ಯನ 5 ನುಡಿಮುತ್ತುಗಳು

ಶುಕ್ರವಾರ, 3 ಮಾರ್ಚ್ 2017 (12:31 IST)
ಯಾರಾದರೂ ಜೀವನದಲ್ಲಿ ಮುಂದೆ ಬಂದಿದ್ದರೆ ಅವನನ್ನ ನೋಡಿ ಚಾಣಾಕ್ಯನಪ್ಪಾ ಎಂದು ಹೇಳುವ ಮಾತುಗಳನ್ನ ಕೇಳೇ ಇರುತ್ತೀರಿ. ಬುದ್ಧಿವಂತರನ್ನ ಚಾಣಾಕ್ಯರಿಗೆ ಹೋಲಿಸಿದ ವಾಡಿಕೆ ಇದೆ. ಚಾಣಾಕ್ಯ ಎಂದರೆ ಬುದ್ಧಿವಂತಿಕೆ ಎಂಬ ಮಾತುಗಳೂ ಇವೆ. ಮೌರ್ಯರ ಪ್ರಥಮ ದೊರೆ ಚಂದ್ರಗುಪ್ತ ಮೌರ್ಯನ ಸಲಹೆಗಾರನಾಗಿದ್ದ ಖ್ಯಾತ ಅರ್ಥ ಶಾಸ್ತ್ರಜ್ಞ ವಿಷ್ಣುಗುಪ್ತಾ ಅಥವಾ ಚಾಣಾಕ್ಯನ ನೀತಿಗಳು ಇಂದಿಗೂ ಫೇಮಸ್. ರಾಜಕೀಯ ಮತ್ತು ಆರ್ಥಿಕ ವಿಚಾರದಲ್ಲಿ ಈತನ ನೀತಿಗಳು ಇಂದಿಗೂ ಜನಪ್ರಿಯ ಮತ್ತು ಪ್ರಚಲಿತ. ಕೌಟಿಲ್ಯನ ಅರ್ಥಶಾಸ್ತ್ರ ಎಲ್ಲ ಆರ್ಥಿಕ ನೀತಿಗಳಿಗೂ ಮಾದರಿ ಎನ್ನಲಾಗುತ್ತೆ.

ಇವತ್ತಿನ ನಿತ್ಯದ ಜೀವನಕ್ಕೂ ಸಂಬಂಧವಿರುವ ಚಾಣಾಕ್ಯ ಹೇಳಿದ ಕೆಲ ನುಡಿಮುತ್ತುಗಳು ಇಲ್ಲಿವೆ.

- ಬೇರೆಯವರು ಮಾಡಿರುವ ತಪ್ಪುಗಳನ್ನ ನೋಡಿ ಕಲಿ, ಅಷ್ಟೂ ತಪ್ಪುಗಳನ್ನ ಮಾಡುವಷ್ಟು ಸಮಯ ನೀನು ಬದುಕಿರುವುದಿಲ್ಲ.

- ನಿನಗೆ ಹಣದ ಸಮಸ್ಯೆ ಇದ್ದರೆ ಯಾರ ಬಳಿಯೂ ಚರ್ಚೆ ನಡೆಸಬೇಡ, ನಿನ್ನ ಆರ್ಥಿಕ ಸಮಸ್ಯೆಯನ್ನ ನಿನ್ನ ಬಳಿಯೇ ಇಟ್ಟುಕೋ.

- ಹೆಂಡತಿ ಬಗ್ಗೆ ಬೇರೆಯವರ ಬಳಿ ಹೇಳುವವರು ತಾವು ಅಂದುಕೊಂಡದನ್ನ ಬಿಟ್ಟು ಬೇರೆಯದ್ದನ್ನೇ ಹೇಳುತ್ತಾರೆ

- ಬಬ್ಬ ಮನುಷ್ಯ ತನ್ನ ಕೆಲಸದಿಂದಷ್ಟೇ ದೊಡ್ಡವನಾಗುತ್ತಾನೆ. ಹುಟ್ಟಿನಿಂದಲ್ಲ

- ಬೇರೆಯವರ ಬಳಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನ ಹೇಳಿಕೊಳ್ಳುವ ಜನರನ್ನ ಅಪಹಾಸ್ಯ ಮತ್ತು ಅಸಡ್ಡೆಯಿಂದ ನೋಡಲಾಗುತ್ತೆ ಮತ್ತು ಬೆನ್ನಹಿಂದೆಯೂ ಹಾಸ್ಯ ಮಾಡಿ ನಗುತ್ತಾರೆ.

ವೆಬ್ದುನಿಯಾವನ್ನು ಓದಿ