ನೀರಜ್ ಚೋಪ್ರಾ ಜತೆ ಮನು ಭಾಕರ್ ಮದುವೆ ಪ್ರಪೋಸಲ್, ಜೋಡಿ ಚೆನ್ನಾಗಿಲ್ವಾ

Sampriya

ಸೋಮವಾರ, 12 ಆಗಸ್ಟ್ 2024 (17:00 IST)
Photo Courtesy X
ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಕಂಚು ಗೆದ್ದಿರುವ ಭಾರತದ ಶೂಟರ್‌ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಭೇಟಿ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು. ಈ ವಿಡಿಯೋ ನೋಡಿದ ನೆಟ್ಟಿಗರು ಮಗಳಿಗೆ ಸಂಬಂಧ ಕುದುರಿಸುತ್ತಿದ್ಧೀರಾ ಎಂದು ತಮಾಷೆ ಮಾಡಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಸುಮೇಧಾ ಭಾಕರ್ ಮತ್ತು ನೀರಜ್ ಚೋಪ್ರಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಸಂಭಾಷಣೆಯ ದೃಶ್ಯಗಳನ್ನು ವೈರಲ್ ಮಾಡಿ, ನೆಟ್ಟಿಗರು ರೇಗಿಸಿದ್ದಾರೆ.

ಆದಾಗ್ಯೂ, ನೀರಜ್ ಚೋಪ್ರಾ ಅವರು ಸುಮೇಧಾ ಅವರು ಜತೆ ಮಾತನಾಡುವ ವಿಡಿಯೋ ಕೆಲವೇ ಕ್ಷಣಗಳಲ್ಲಿ ಇಂಟರ್‌ನೆಟ್‌ನಲ್ಲಿ ಬಿರುಗಾಳಿಯಂತೆ ಹರಿದಾಡಿದೆ. ಆ ಕ್ಲಿಪ್‌ನಲ್ಲಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಚೋಪ್ರಾ ಕೈಹಿಡಿದು ಸಂಭಾಷಣೆಯಲ್ಲಿ ತೊಡಗಿದ್ದಾರೆ.  ಎಕ್ಸ್‌ನಲ್ಲಿ ಈ ವೀಡಿಯೊ ಅರ್ಧ ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ನೀರಜ್ ಚೋಪ್ರಾ ಅವರನ್ನು ಅಳಿಯನ್ನಾಗಿ  ಮಾಡಲು ಮಾತುಕತೆ ನಡೆಸುತ್ತಿರುವ ಹಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು,  "ಭಾರತೀಯ ತಾಯಿ ತನ್ನ ಮಗಳ ಮದುವೆಯ ಬಗ್ಗೆ  ಹುಡುಗನೊಂದಿಗೆ ಮಾತನಾಡುತ್ತಿದ್ದಾರೆ, ಎಂದಿದ್ದಾರೆ.

ಮದುವೆ ಆಗುತ್ತೇನೆಂದು ಒಪ್ಪಿಕೊಳ್ಳುವವರೆಗೂ ಬಿಡಬೇಡಿ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಶೂಟರ್ ಮನು ಭಾಕರ್ ಅವರು ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಾತ್ರರಾಗುದ್ದಾರೆ. ಇವರು ಮಹಿಳೆಯರ 10 ಮೀ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದರು ಮತ್ತು ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು. ನಾಲ್ಕು ವರ್ಷಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ