ಏಷ್ಯಾ ಕಪ್‌ ಕ್ರಿಕೆಟ್‌: ದಾಖಲೆಯ ಎಂಟನೇ ಪ್ರಶಸ್ತಿ ಗೆಲ್ಲುವತ್ತ ಭಾರತದ ವನಿತೆಯರು

Sampriya

ಭಾನುವಾರ, 28 ಜುಲೈ 2024 (10:14 IST)
Photo Courtesy X
ದಂಬುಲಾ: ಮಹಿಳಾ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಇಂದು ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.  ಹರ್ಮನ್‌ಪ್ರೀತ್‌ ಬಳಗವು ದಾಖಲೆ ಎಂಟನೇ ಬಾರಿ ಟ್ರೋಫಿ ಗೆಲ್ಲುವ ಗುರಿಯಲ್ಲಿದೆ.

ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ದಾಂಬುಲಾದ ರಂಗಿರಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಾಗಿ ಸಹಕಾರಿಯಾಗಿದೆ. ಅದರಲ್ಲೂ ಈ ಪಂದ್ಯ ಹಗಲು ರಾತ್ರಿ ನಡೆಯುವ ಕಾರಣ ಸ್ಪಿನ್ನಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇತ್ತಂಡಗಳು ಕೂಡ ಟಾಸ್​ ಗೆದ್ದರೆ ಚೇಸಿಂಗ್​ ಹಾಗೂ ಸ್ಪಿನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದ ಭಾರತ ವನಿತೆಯರು, ನಂತರದ ಪಂದ್ಯಗಳಲ್ಲಿ ಯುಎಇ ವಿರುದ್ಧ 78ರನ್‌ಗಳಿಂದ, ನೇಪಾಳ ವಿರುದ್ಧ 82 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ದ 10 ವಿಕೆಟ್‌ಗಳ ಸುಲಭ ಗೆಲುವು ಪಡೆದಿರುವುದು ತಂಡದ ಮೇಲುಗೈಯನ್ನು ಸೂಚಿಸುತ್ತಿದೆ.

ಮತ್ತೊಂದೆಡೆ ಶ್ರೀಲಂಕಾ ಕೂಡಾ ಟೂರ್ನಿಯಲ್ಲಿ ಅಜೇಯವಾಗುಳಿದಿದೆ. ಶ್ರೀಲಂಕಾದ ಆಧಿಪತ್ಯಕ್ಕೆ ನಾಯಕಿ ಚಾಮರಿ ಅಟ್ಟಪಟ್ಟು ಅವರ ಉತ್ತಮ ಫಾರ್ಮ್‌ ಕಾರಣವಾಗಿದೆ. ಅವರು ಈ ಟೂರ್ನಿಯಲ್ಲಿ 243 ರನ್‌ ಗಳಿಸಿ ಯಶಸ್ವಿ ಬ್ಯಾಟರ್ ಎನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ