ಫೈನಲ್ ಗೆ ಕಮಲ್ ಪ್ರೀತ್ ಲಗ್ಗೆ: ಮಗಳ ಸಾಧನೆ ನೋಡದ ಅಪ್ಪ!

ಶನಿವಾರ, 31 ಜುಲೈ 2021 (14:47 IST)
ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಕಮಲ್ ಪ್ರೀತ್ ಸಿಂಗ್ ಆರಂಭದಲ್ಲೇ 60.29ಮೀ. ದೂರ ಡಿಸ್ಕಸ್ ಎಸೆದರೆ ನಂತರ ಗರಿಷ್ಠ 63.97 ಮೀ. ಎಸೆದು ಗರಿಷ್ಠ ಸಾಧನೆ ಮಾಡಿದರು.
ಆದರೆ ತಂದೆ ಊರಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮಧ್ಯದಲ್ಲಿ ಬಿಟ್ಟುಬರಲು ಸಾಧ್ಯವಾಗದ ಕಾರಣ ಟೋಕಿಯೊದಲ್ಲಿ ಮಗಳ ಸಾಧನೆ ವೀಕ್ಷಿಸಲು ಬಂದಿರಲಿಲ್ಲ. ಅಲ್ಲದೇ ಟೀವಿಯಲ್ಲಿ ನೇರ ಪ್ರಸಾರದಲ್ಲೂ ನೋಡಲಿಲ್ಲ
25 ವರ್ಷದ ಪಟಿಯಾಲ ಮೂಲದ ಕಮಲ್ ಪ್ರೀತ್ 2021ರಲ್ಲಿ 66.49 ಮೀ. ಎಸೆತ ದಾಖಲಿಸಿರುವುದು ಈಗಲೂ ವಿಶ್ವದ ಗರಿಷ್ಠ 6 ಎಸೆತಗಳಲ್ಲಿ ಒಂದಾಗಿ ದಾಖಲಾಗಿದೆ. ಈ ಸಾಧನೆಯನ್ನು ಫೈನಲ್ ನಲ್ಲಿ ಪುನರಾವರ್ತಿಸಿದರೂ ಕನಿಷ್ಠ ಪದಕ ಖಚಿತಗೊಳ್ಳಲಿದೆ.
ಅರ್ಹತಾ ಸುತ್ತಿನಲ್ಲಿ 31 ಸ್ಪರ್ಧಿಗಳು ಕಣಕ್ಕಿಳಿದಿದ್ದು, ಇದರಲ್ಲಿ ಕಮಲ್ ಪ್ರೀತ್ ಕೇವಲ 2 ಬಾರಿ ಮಾತ್ರ ಯಶಸ್ವಿಯಾಗಿ ಡಿಸ್ಕಸ್ ಎಸೆಯುವಲ್ಲಿ ಸಫಲರಾದರು. ಆದರೆ ಎರಡನೇ ಯಶಸ್ವಿ ಪ್ರಯತ್ನದಲ್ಲೇ ಕಮಲಾ ಫೈನಲ್ ನಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾದರು. 64 ಮೀ.ಗಿಂತ ಹೆಚ್ಚು ದೂರ ಎಸೆದವರು ಸಹಜವಾಗಿ ಫೈನಲ್ ಪ್ರವೇಸುವ ಅವಕಾಶ ನೀಡಲಾಗಿತ್ತು. ಎರಡು ಬಾರಿಯ ಚಾಂಪಿಯನ್ ಸ್ಯಾಂಡ್ರಾ ಪೆರ್ಕೊವಿಕ್ 63.75 ಮೀ. ದೂರ ಎಸೆದಿದ್ದರು.
ಕಮಲ್ ಪ್ರೀತ್ ನನಗೆ ಪಂದ್ಯದ ಸಮಯ ಹೇಳಿದ್ದಳು. ಆದರೆ ಡಿಡಿಯಲ್ಲಿ ಆ ಸಮಯದಲ್ಲಿ ಬೇರೇನೋ ತೋರಿಸುತ್ತಿದ್ದು. ನನಗೆ ಕಾಯಲು ಸಮಯ ಇರಲಿಲ್ಲ. ನಮ್ಮ ಭೂಮಿಯಲ್ಲಿ ಕೃಷಿಗೆ ಕೆಲಸ ಬಾಕಿ ಇತ್ತು ಎಂದು ತಂದೆ ಕುಲದೀಪ್ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ