ಟೋಕಿಯೊ ಒಲಿಂಪಿಕ್ಸ್: ಮೊದಲ ಪ್ರಯತ್ನದಲ್ಲೇ ನೀರಜ್ ಚೋಪ್ರಾ ಫೈನಲ್ ಗೆ
ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚೊಚ್ಚಲ ಪ್ರವೇಶದಲ್ಲೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ 23
ವರ್ಷದ ನೀರಜ್ ಚೋಪ್ರಾ 86.65 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಎ ದರ್ಜೆಯ ಸ್ಪರ್ಧಿಯಾಗಿ ಫೈನಲ್ ಗೆ ಲಗ್ಗೆ ಹಾಕಿದರು.
ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ 83.50ಮೀ. ದೂರ ಎಸೆದಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿ 90 ಮೀ. ದೂರದವರೆಗೆ ಎಸೆತ ದಾಖಲಿಸಿದ್ದ ಜರ್ಮನಿಯ ವೆಟ್ಟರ್ 7ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದ್ದು, ಭಾರತದ ವಿಶ್ವಾಸ ಹೆಚ್ಚಿಸಿದೆ.