ಓಟ-ಬೆಕಲ್‌ಗೆ ಮತ್ತೊಂದು ಬಂಗಾರ

ಭಾನುವಾರ, 24 ಆಗಸ್ಟ್ 2008 (18:25 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ 5 ಸಾವಿರ ಮೀಟರ್‍ ಓಟದಲ್ಲಿ ದಾಖಲೆಯೊಂದಿಗೆ ಸ್ವರ್ಣ ಪದಕ ಜಯಿಸಿದ ಕೆನ್ನೆನಿಸಾ ಬೆಕಲ್ ಅವರು 28ವರ್ಷಗಳ ಸುದೀರ್ಘ ಅವಧಿ ನಂತರ ಈ ಸಾಧನೆ ಮಾಡಿದ ಪ್ರಥಮ ಓಟಗಾರ ಎಂಬ ಶ್ಲಾಘನೆಗೆ ಪಾತ್ರರಾದರು.

ಕಳೆದ ಭಾನುವಾರ ಅವರು 10ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದರು. 1980ರಲ್ಲಿ ಇಥಿಯೋಪಿಯಾದ ಮಿರುಟಸ್ ಯಿಫ್ಟರ್ ಅವರು ಮಾಸ್ಕೋ ಒಲಿಂಪಿಕ್ ಕೂಟದಲ್ಲಿ 5ಸಾವಿರ ಮೀ.ಓಟದಲ್ಲಿ ಮಾಡಿದ್ದ ಸಾಧನೆಯನ್ನು ಅವರು ಈ ಬಾರಿ ಮುರಿದರು.

ಅಥೆನ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡ ಬೆಕಲ್,ಬೀಜಿಂಗ್‌ನಲ್ಲಿ ಅತ್ಯುತ್ತಮ ಓಟವನ್ನು ಓಡಿ 12:57.82ಸೆಕೆಂಡ್ಸ್‌ಗಳಲ್ಲಿ ಕ್ರಮಿಸಿ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

400ಮಿ.ರೆಲೆ ಸ್ಪರ್ಧೆಯಲ್ಲಿ ಜಮೈಕಾ ತಂಡ ಕೊನೆಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಈ ಸ್ಪರ್ಧೆಯಲ್ಲಿ ಲಾತಾನ್ ಮೆರ್ರಿಟ್,ಆಂಜೆಲೊ ಟೇಲರ್,ಡೇವಿಡ್ ನೆವಿಲ್ಲೆ,ಜೆರ್ಮಿ ವಾರ್ನರ್ ಅವರನ್ನೊಳಗೊಂಡ ಅಮೆರಿಕ ತಂಡ
2:55.39 ಸೆಕೆಂಡ್ಸ್‌ಗಳಲ್ಲಿ ದೂರವನ್ನು ಕ್ರಮಿಸುವ ಮೂಲಕ 1992ರ ಬಾರ್ಸಿಲೋನಾ ಕೂಟದಲ್ಲಿ ತಮ್ಮ ದೇಶದವರೇ 2:55.74ಸೆ.ನೊಂದಿಗೆ ಸ್ಥಾಪಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿದರು.

ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನಾರ್ವೆ ದೇಶದ ಆಂಡ್ರೇಸ್ ಫಾರ್ಕಿಲ್ಡ್‌ಸನ್ ಅವರು ಜಾವೆಲಿನ್ ಅನ್ನು 90.57ಮಿ.ದೂರಕ್ಕೆ ಎಸೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ವೆಬ್ದುನಿಯಾವನ್ನು ಓದಿ