ವಿಚ್ಛೇದನ ಪಡೆದ ಬೆನ್ನಲ್ಲೇ ಯಜುವೇಂದ್ರ ಚಾಹಲ್ ಪ್ರತಿಭೆಯನ್ನು ಕೊಂಡಾಡಿದ ಆಪ್ತ ಗೆಳತಿ ಆರ್‌ಜೆ ಮಹ್ವಾಶ

Sampriya

ಬುಧವಾರ, 16 ಏಪ್ರಿಲ್ 2025 (10:03 IST)
Photo Courtesy X
ಮೊಹಾಲಿ: ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪಿನ್ನರ್‌ ಅವರ ಕೈಚಳಕದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ರೋಚಕ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು 16 ರನ್‌ಗಳಿಂದ ಮಣಿಸಿತು.

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಿಸಿ ಅವರನ್ನು ರಕ್ಷಿಸುವಲ್ಲಿ ಪಂಜಾಬ್‌ ತಂಡವು ಯಶಸ್ವಿಯಾಗಿತ್ತು. ಚಾಹಲ್‌ ನಾಲ್ಕು ವಿಕೆಟ್‌ ಪಡೆದು ಗೆಲುವಿನ ರೂವಾರಿಯಾಗಿದ್ದರು. ಮತ್ತೊಂದೆಡೆ ಮಾರ್ಕೊ ಯಾನ್ಸನ್‌ ಮೂರು ವಿಕೆಟ್‌ ಕಬಲಿಸಿದ್ದರು.

ಪಂದ್ಯದುದ್ದಕ್ಕೂ ಕೋಲ್ಕತ್ತ ತಂಡಕ್ಕೆ ಚಾಹಲ್ ಸಿಂಹಸ್ವಪ್ನವಾಗಿ ಕಾಡಿದರು. ಪಂದ್ಯ ಗೆದ್ದ ಖುಷಿಯಲ್ಲಿ ಪಂಜಾಬ್ ಕಿಂಗ್ಸ್‌ ಒಡತಿ ಪ್ರೀತಿ ಝಿಂಟಾ ತಂಡದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಚಾಹಲ್‌ ಅವರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ.

ಈ ನಡುವೆ ಚಾಹಲ್‌ ಅವರ ಪ್ರತಿಭೆಯನ್ನು ಅವರ ಆಪ್ತ ಗೆಳತಿ ಆರ್‌ಜೆ ಮಹ್ವಾಶ ಅವರು ಇನ್‌ಸ್ಟಾಗ್ರಾಂನಲ್ಲಿ ಕೊಂಡಾಡಿದ್ದಾರೆ.
ಚಾಹಲ್‌ ಅವರೊಂದಿಗಿನ ಸೆಲ್ಫಿ ಫೋಟೊವನ್ನು ಹಂಚಿಕೊಂಡು, ಎಂಥಾ ಪ್ರತಿಭಾನ್ವಿತ ವ್ಯಕ್ತಿ. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬುದಕ್ಕೆ ಒಂದು ಕಾರಣವಿದೆ. ಅಸಂಭವ! ಎಂದು ಬರೆದುಕೊಂಡಿದ್ದಾರೆ.

ಚಾಹಲ್ ಅವರು ಮಾಜಿ ಪತ್ನಿ ಧನಶ್ರೀ ಅವರೊಂದಿಗೆ ವಿಚ್ಛೇದನ ನಂತರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಫೈನಲ್‌ ಪಂದ್ಯದಲ್ಲಿ ಮೊದಲ ಬಾರಿಗೆ ಮಹ್ವಾಶ ಅವರೊಂದಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ