6ನೇ ಪ್ರಯತ್ನದಲ್ಲಿ ಜಯಿಸಿದ ಕೇಟ್ ವಿನ್‌ಸ್ಲೆಟ್

ಸೋಮವಾರ, 23 ಫೆಬ್ರವರಿ 2009 (12:27 IST)
'ದಿ ರೀಡರ್' ಚಿತ್ರದಲ್ಲಿ ಜರ್ಮನಿಯ ತರುಣಿಯ ಪಾತ್ರ ನಿರ್ವಹಿಸಿದ್ದ 'ಟೈಟಾನಿಕ್' ಖ್ಯಾತಿಯ ಕೇಟ್ ವಿನ್‌ಸ್ಲೆಟ್ ಇದುವರೆಗೆ ಆರು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದು, ಐದು ಬಾರಿ ಸೋತು, ಆರನೇ ಬಾರಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೀಡರ್ ಚಿತ್ರದಲ್ಲಿ ಆಕೆಯದು ನಾಝಿ ಹಿನ್ನೆಲೆಯುಳ್ಳ, ಯುವ ಪ್ರೇಮಿಯ ಪಾತ್ರ.

ಕೇಟ್ ಬಗ್ಗೆ ಪ್ರಮುಖ ಐದು ಮಾಹಿತಿ ಇಲ್ಲಿದೆ:

* 33ರ ಹರೆಯದ ಕೇಟ್ ಜನಿಸಿದ್ದು ಇಂಗ್ಲೆಂಡ್‌ನ ರೀಡಿಂಗ್ ಎಂಬಲ್ಲಿ 1975ರ ಅಕ್ಟೋಬರ್ 5ರಂದು. ಆಕೆಯ ಹೆತ್ತವರು ಕೂಡ ಬ್ರಿಟಿಷ್ ರಂಗ ಕಲಾವಿದರೇ.

* ಲಿಟ್ಲ್ ಚಿಲ್ಡ್ರನ್ (2006), ಎಟರ್ನಲ್ ಸನ್‌ಶೈನ್ ಆಫ್ ಜಿ ಸ್ಪಾಟ್‌ಲೆಸ್ ಮೈಂಡ್ (2004), ಐರಿಸ್ (2001), ಟೈಟಾನಿಕ್ (1997) ಮತ್ತು ಸೆನ್ಸ್ ಆಂಡ್ ಸೆನ್ಸಿಬಿಲಿಟಿ (1995) ಚಿತ್ರಗಳ ನಟನೆಗಾಗಿ ಈ ಹಿಂದೆಯೂ ಆಕೆಯ ಹೆಸರು ಆಸ್ಕರ್‌ಗೆ ನಾಮಕರಣಗೊಂಡಿತ್ತು. ಆದರೆ 14 ವರ್ಷಗಳ ಬಳಿಕ ಆಕೆ ಆಸ್ಕರ್-ಶಾಪ ಮುಕ್ತಳಾಗಿದ್ದಾಳೆ.

* ಆಕೆಯ ಸುಂದರವಾದ ತಲೆಕೂದಲು ಮತ್ತು ಆಕರ್ಷಕ ಮೈಬಣ್ಣಕ್ಕಾಗಿ ಕೇಟ್ ಅನ್ನು ಹೆಚ್ಚಿನವರು 'ಬ್ರಿಟಿಷ್ ಗುಲಾಬಿ' ಎಂದೇ ಕರೆಯುತ್ತಾರೆ.

* ದಿ ರೀಡರ್ ಚಿತ್ರದಲ್ಲಿ ತಾನು ನಿರ್ವಹಿಸಿದ ಹನ್ನಾ ಶ್ಮಿಜ್ ಪಾತ್ರವು ತಾನು ಇದುವರೆಗೆ ನಟಿಸಿದ ಚಿತ್ರಗಳಲ್ಲೇ ಅತ್ಯಂತ ಸವಾಲಿನ ಪಾತ್ರವಾಗಿತ್ತು, ಅದು ತನ್ನನ್ನು ಬಹುತೇಕ ತನ್ನನ್ನು ಬುದ್ಧಿಭ್ರಮಣೆಗೊಳಗಾದವಳನ್ನಾಗಿ ಮಾಡಿತ್ತು ಎಂದು ಇತ್ತೀಚೆಗಷ್ಟೇ ಕೇಟ್ ಹೇಳಿದ್ದರು!

* 1995ರಲ್ಲಿ ಬರ್ನಾರ್ಡ್ ಶ್ಲಿಂಕ್ ಬರೆದ ಜರ್ಮನ್ ಕಾದಂಬರಿ 'ಡೆರ್ ವಾರ್ಲಿಸರ್' ಕಾದಂಬರಿ ಆಧಾರಿತ ದಿ ರೀಡರ್ ಚಿತ್ರವು ಈಗಾಗಲೇ ವಿಶ್ವಾದ್ಯಂತ ಬಾಕ್ಸ್ ಆಫೀಸಿನಲ್ಲಿ 27 ದಶಲಕ್ಷ ಡಾಲರ್ ಗಳಿಕೆ ದಾಖಲಿಸಿದೆ.

ವೆಬ್ದುನಿಯಾವನ್ನು ಓದಿ