ಒಲಿಂಪಿಕ್ಸ್‌ನಲ್ಲಿ ಪ್ರುಡುನೋವಾ ಅಚ್ಚುಕಟ್ಟಾಗಿ ಪ್ರದರ್ಶಿಸಿದ ದೀಪಾ ಕರ್ಮಾಕರ್

ಸೋಮವಾರ, 8 ಆಗಸ್ಟ್ 2016 (16:14 IST)
ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ರಿಯೊ ಒಲಿಂಪಿಕ್ಸ್ ವೈಯಕ್ತಿಕ ವಾಲ್ಟ್ ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದು ವೈಯಕ್ತಿಕ ವಾಲ್ಟ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ  ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಪ್ರೊಡುನೋವಾ ವಾಲ್ಟ್ ಕಸರತ್ತನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ ದೀಪಾ ಎರಡು ಪ್ರಯತ್ನಗಳ ಬಳಿಕ 14. 850 ಪಾಯಿಂಟ್ ಗಳಿಸಿದರು. ಬ್ಯಾಲೆನ್ಸ್ ಬೀಮ್‌ನಲ್ಲಿ ದೀಪಾ ಒಟ್ಟು 12.866 ಸ್ಕೋರ್ ಮಾಡಿದರು. ಫ್ಲೋರ್ ವ್ಯಾಯಾಮದಲ್ಲಿ ದೀಪ 12. 033 ಸ್ಕೋರ್ ಮಾಡಿದರು.

ಕಾಮನ್‌ವೆಲ್ತ್ ಕ್ರೀಡಾಕೂಟ ಗೆದ್ದ ಮೊದಲ ಭಾರತೀಯ ಮಹಿಳೆ ದೀಪಾ ಒಟ್ಟು 51.665 ಪಾಯಿಂಟ್ ಸ್ಕೋರ್ ಮಾಡಿದರು. ದೀಪಾ ಅವರ ಕಸರತ್ತನ್ನು ಕೆಳಗಿನ ವಿಡಿಯೊದಲ್ಲಿ ನೋಡಿ 

 

ವೆಬ್ದುನಿಯಾವನ್ನು ಓದಿ