ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗುರುವಾರ ಕ್ರೀಡಾ ಸಚಿವ ಇಪಿ ಜಯರಾಜನ್ ವಿರುದ್ಧ ದೂರನ್ನು ನೀಡಿದ್ದಾರೆ. ಕೇರಳ ಕ್ರೀಡಾ ಮಂಡಳಿಯ ಸದಸ್ಯರಿಗೆ ಮತ್ತು ತಮಗೆ ಜಯರಾಜನ್ ಕಿರುಕುಳ ನೀಡಿದ್ದಾರೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಯಿಂದ ಬೇಸರಗೊಂಡ ಅಂಜು ಮುಖ್ಯಮಂತ್ರಿ ಪಿನಯರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ದೂರಿನ ಪತ್ರವನ್ನು ಸಲ್ಲಿಸಿದರು. ಸಚಿವರು ಎಲ್ಲರನ್ನೂ ವಿರೋಧ ಪಕ್ಷದ ಬೆಂಬಲಿಗರು ಎಂದು ಆರೋಪಿಸಿ, ಎಲ್‌ಡಿಎಫ್ ಅಧಿಕಾರದಲ್ಲಿರುವುದರಿಂದ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಅಂಜು ದೂರಿನಲ್ಲಿ ತಿಳಿಸಿದ್ದಾರೆ.