ಮಹಿಳೆಯನ್ನ ಅಪಹರಿಸಿ ರಾತ್ರಿಯಿಡೀ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ

ಮಂಗಳವಾರ, 20 ಜೂನ್ 2017 (11:42 IST)
ಮಹಿಳೆಯನ್ನ ಅಪಹರಿಸಿದ ದುಷ್ಕರ್ಮಿಗಳು ಚಲಿಸುವ ಕಾರಿನಲ್ಲಿ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ರಸ್ತೆ ಮೇಲೆ ಎಸೆದು ಹೋಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಅತ್ಯಾಚಾರಕ್ಕೀಡಾದ 30 ವರ್ಷದ ಮಹಿಳೆ ಕೆಲ ವಾರಗಳ ಹಿಂದಷ್ಟೇ ಗುರ್ ಗಾಂವ್`ಗೆ ಬಂದು ನೆಲೆಸಿದ್ದರು ಎನ್ನಲಾಗಿದೆ. ಮಹಿಳೆ ಹೇಳಿಕೆ ನೀಡಿರುವ ಪ್ರಕಾರ, ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಗುರ್ ಗಾಂವ್`ನಲ್ಲಿ ಅಪಹರಿಸಿದ ಮೂವರು ಕಾಮುಕರು ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕಾರನ್ನ ಎಲ್ಲಿಯೂ ನಿಲ್ಲಿಸದೇ ರಾಜಧಾನಿಯಿಂದ ಗ್ರೇಟರ್ ನೋಯ್ಡಾವರೆಗೆ ಸುತ್ತಿಸಿ ಕಾರಿನಲ್ಲೆ ರೇಪ್ ಮಾಡಿದ್ದಾರೆ. ಬಳಿಕ ಗ್ರೇಟರ್ ನೋಯ್ಡಾ ಬಳಿ ಎಸೆದು ಹೋಗಿದ್ದಾರೆ.

ಮಹಿಳೆ ರಸ್ತೆ ಮೇಲೆ ಗಾಯಗೊಂಡು ಬಿದ್ದಿದ್ದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ.. ಜಸ್ಪ್ರೀತ್ ನುಮ್ರಾ ಮಾಡಿದ ಆ ತಪ್ಪು ಫೈನಲ್ ಪಂದ್ಯದ ಗತಿಯನ್ನೇ ಬದಲಿಸಿತು..!

ಇದನ್ನೂ ಓದಿ.. ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿತ್ತು ಶಿಕ್ಷಕಿ-ವಿದ್ಯಾರ್ಥಿಯ ಸಂಭೋಗದ ವಿಡಿಯೋ..!

 


ವೆಬ್ದುನಿಯಾವನ್ನು ಓದಿ