ಆರೋಗ್ಯಕರವಾದ ಮೆಂತ್ಯ ಕಾಳಿನ ಸಾಂಬಾರ್

ಮಂಗಳವಾರ, 4 ಆಗಸ್ಟ್ 2020 (08:22 IST)
ಬೆಂಗಳೂರು : ಮೆಂತ್ಯಕಾಳು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪದಾರ್ಥಗಳಲ್ಲಿ ಒಂದು. ಆದಕಾರಣ ರುಚಿಕರವಾದ, ಆರೋಗ್ಯಕರವಾದ, ತುಂಬಾ ಸುಲಭವಾಗಿ ರೆಡಿಯಾಗುವಂತಹ  ಮೆಂತ್ಯ ಕಾಳಿನ  ಸಾಂಬಾರ್ ಮಾಡಿ.

ಬೇಕಾಗುವ ಸಾಮಾಗ್ರಿಗಳು : 3 ಚಮಚ ಎಣ್ಣೆ, ಆಮೇಲೆ, ಸಾಸಿವೆ ¼ ಚಮಚ, ಅರಶಿನ ಪುಡಿ ಸ್ವಲ್ಪ, ¼ ಚಮಚ  ಜೀರಿಗೆ, ಒಣ ಮೆಣಸು 3, ಕರಿಬೇವು ಸ್ವಲ್ಪ, ಬೆಲ್ಲ 2 ಚಮಚ, ಉಪ್ಪು, ಹುಣಸೆ ಹಣ್ಣಿನ ರಸ 3 ಚಮಚ, ತೆಂಗಿನಕಾಯಿ ಹಾಲು 1 ಕಪ್, ಸಾಂಬಾರ್ ಪುಡಿ 1 ಚಮಚ, ಮೆಣಸಿನ ಪುಡಿ 1 ಚಮಚ, ಮೆಂತ್ಯ ಕಾಳು 1 ಚಮಚ.

ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು , ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿ, ನಂತರ ಇದಕ್ಕೆ ಮೆಂತ್ಯಕಾಳನ್ನು ಹಾಕಿ ಬಾಡಿಸಿ. ಆಮೇಲೆ ನೀರು ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ, ರುಚಿಗೆ ತಕಷ್ಟು ಉಪ್ಪು, ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ ಮುಚ್ಚಿಟ್ಟು ಚೆನ್ನಾಗಿ ಕುದಿಸಿ. ಮೆಂತ್ಯಕಾಳು ಚೆನ್ನಾಗಿ ಬೆಂದ ನಂತರ ಅದಕ್ಕೆ ತೆಂಗಿನಕಾಯಿ ಹಾಲನ್ನು ಹಾಕಿ, ಸಾಂಬಾರ್ ಪುಡಿ ಹಾಗೂ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪಾತ್ರೆಯನ್ನು ಮುಚ್ಚಿಟ್ಟು 5 ನಿಮಿಷ ಕುದಿಸಿ ಕೆಳಗಿಳಿಸಿ. ಈಗ ಬಿಸಿ ಬಿಸಿಯಾದ ಆರೋಗ್ಯಕರವಾದ   ಮೆಂತ್ಯಕಾಳಿನ  ಸಾಂಬಾರ್ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ