ಒಣಮೀನಿನ ಗ್ರೇವಿ ಮಾಡುವ ವಿಧಾನ

ಗುರುವಾರ, 6 ಆಗಸ್ಟ್ 2020 (08:25 IST)
ಬೆಂಗಳೂರು : ಒಣಮೀನನ್ನು ಹೆಚ್ಚಾಗಿ ಯಾರು ಇಷ್ಟಪಡುವುದಿಲ್ಲ. ಆದರೆ ಒಣಮೀನಿನಿಂದ ಈ ಗ್ರೇವಿ ಮಾಡಿದರೆ ಎಲ್ಲರೂ ಇಷ್ಟಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು : ಒಣಮೀನು, 1ಈರುಳ್ಳಿ, 1 ಹಸಿಮೆಣಸಿನ ಕಾಯಿ, ಸ್ವಲ್ಪ ಶುಂಠಿ, ¼ ಚಮಚ ಮೆಂತೆ, 12 ಎಸಳು ಬೆಳ್ಳುಳ್ಳಿ, ½ ಚಮಚ ಜೀರಿಗೆ, ¼ ಕಪ್ ಕಾಳುಮೆಣಸು, 1 ಚಮಚ ಖಾರ ಪುಡಿ, 1 ಚಮಚ ಅರಶಿನ, 1 ಚಮಚ ದನಿಯಾ ಪುಡಿ, ಕರಿಬೇವು.   

ಮಾಡುವ ವಿಧಾನ : ಮೊದಲಿಗೆ ಒಣಮೀನನ್ನು ಎಣ್ಣೆಯಲ್ಲಿ ಪ್ರೈ ಮಾಡಿಟ್ಟಿಕೊಳ್ಳಿ. ಬಳಿಕ ಮಿಕ್ಸಿಯಲ್ಲಿ ಹಸಿಮೆಣಸಿನ ಕಾಯಿ, ಮೆಂತೆ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕಾಣುಮೆಣಸು ಇವಿಷ್ಟನ್ನು ಹಾಕಿ ರುಬ್ಬಿ ಮಸಾಲೆ ರೆಡಿ ಮಾಡಿಕೊಳ್ಳಿ. ಬಳಿಕ ಒಂದು ಪಾತ್ರಗೆ ಸ್ವಲ್ಪ ಎಣ್ಣೆಹಾಕಿ ಅದಕ್ಕೆ ಈರುಳ್ಳಿ ಹಾಕಿ ಪ್ರೈ ಮಾಡಿ. ಬಳಿಕ  ಅದಕ್ಕೆ 2 ಚಮಚ ಮಸಾಲ, ಖಾರ ಪುಡಿ,  ಅರಶಿನ , ದನಿಯಾ ಪುಡಿ, ಕರಿಬೇವು, ರುಬ್ಬಿದ ಟೊಮೆಟೊ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀರನ್ನು ಮಿಕ್ಸ್ ಮಾಡಿ ಕುದಿಸಿ. ಇದಕ್ಕೆ ಫ್ರೈ ಮಾಡಿದ ಒಣಮೀನನ್ನು ಹಾಕಿ ಮಿಕ್ಸ್ ಮಾಡಿದರೆ ಒಣಮೀನಿನ  ಗ್ರೇವಿ ರೆಡಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ