ಹಲಸಿನ ಬೀಜದಲ್ಲೂ ರುಚಿಯಾದ ಹೋಳಿಗೆ ಮಾಡಬಹುದು

ಶುಕ್ರವಾರ, 30 ಡಿಸೆಂಬರ್ 2016 (08:02 IST)
ಬೆಂಗಳೂರು: ಹಲಸಿನ ಬೀಜದ ಸಾಂಬಾರ್ ನಷ್ಟೇ ಹಲಸಿನ ಬೀಜದ ಹೋಳಿಗೆಯೂ ಫೇಮಸ್ಸು. ಬಹುಶಃ ಹಲಸಿನ ಕಾಯಿಯಲ್ಲಿ ಮಾತ್ರ ಯಾವ ಭಾಗವನ್ನೂ ಹಾಳು ಮಾಡದೇ ಉಪಯೋಗಿಸಬಹುದು. ಬೀಜದ ಹೋಳಿಗೆ ಮಾಡುವುದು ಹೇಗೆಂದು ನೋಡೋಣ.


ಬೇಕಾಗುವ ಸಾಮಗ್ರಿಗಳು

ಹಲಸಿನ ಬೀಜ
ಬೆಲ್ಲ
ಕಾಯಿ ತುರಿ
ಏಲಕ್ಕಿ
ಅಕ್ಕಿ ಹಿಟ್ಟು
ಉಪ್ಪು

ಮಾಡುವ ವಿಧಾನ

ಬೆಳ್ತಿಗೆ ಅಕ್ಕಿಯನ್ನು ನೆನೆ ಹಾಕಿ. ಹಲಸಿನ ಬೀಜವನ್ನು ಸಿಪ್ಪೆ ತೆಗೆದು ಹಬೆಯಲ್ಲಿ ಬೇಯಿಸಿಕೊಳ್ಳಿ. ಇದನ್ನು ಬೆಲ್ಲದ ಜತೆ ಹೆಚ್ಚು ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಏಲಕ್ಕಿ ಮತ್ತು ಕಾಯಿ ತುರಿ ಸೇರಿಸಿ ಗಟ್ಟಿ ಹಿಟ್ಟು ಮಾಡಿಕೊಳ್ಳಿ. ಮೊದಲೇ ನೆನೆ ಹಾಕಿದ ಅಕ್ಕಿಯನ್ನು ನೀರು ದೋಸೆಯ ಹದಕ್ಕೆ ಸ್ವಲ್ಪವೇ ಉಪ್ಪು ಹಾಕಿ ರುಬ್ಬಿಕೊಳ್ಳಿ.

ನಂತರ ತಯಾರಾದ ಹಿಟ್ಟನ್ನ ವಡೆಯಂತೆ ತಟ್ಟಿಕೊಂಡು ರುಬ್ಬಿದ ಅಕ್ಕಿ ಹಿಟ್ಟಿನಲ್ಲಿ ಅದ್ದಿ ಕಾದ ಕಾವಲಿ ಮೇಲೆ ಬೇಯಿಸಿ. ಇದನ್ನು ಎರಡೂ ಬದಿ ಸಣ್ಣ ಉರಿಯಲ್ಲಿ ಬೇಯಿಸಿದರೆ ಹಲಸಿನ ಬೀಜದ ಹೋಳಿಗೆ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ