ಸ್ವಾದಿಷ್ಠ ಅಪ್ಪೇಹುಳಿ

ಸೋಮವಾರ, 25 ಮಾರ್ಚ್ 2019 (14:38 IST)
ಬೇಕಾಗುವ ಪದಾರ್ಥಗಳು:
 
1 ನಿಂಬೆ ಹಣ್ಣು ಅಥವಾ 1 ಬೇಯಿಸಿದ ಮಾವಿನಕಾಯಿ
 
ಒಗ್ಗರಣೆ ಪದಾರ್ಥಗಳು: 
ಉದ್ದಿನಬೇಳೆ 1 ಚಮಚ
ಒಣ ಮೆಣಸು 1
ಸಾಸಿವೆ ಕಾಳು ಅರ್ಧ ಚಮಚ
ಹಸಿ ಮೆಣಸು 1
ಜಜ್ಜಿದ ಬೆಳ್ಳುಳ್ಳಿ ಎಸಳು 2 
ಸ್ವಲ್ಪ ಅರಿಶಿನ ನೀರು
2 ಲೋಟ ಉಪ್ಪು
1 ಚಮಚ ಬೆಲ್ಲ / ಸಕ್ಕರೆ - ಅರ್ಧ ಚಮಚ
 
ಮಾಡುವ ವಿಧಾನ: 
 
ಎರಡು ಲೋಟ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಮತ್ತು 1 ಚಮಚ ಬೆಲ್ಲ ಹಾಗೂ ನಿಂಬೆ ಹಣ್ಣಿನ ರಸ (ಅಥವಾ ಬೇಯಿಸಿದ ಮಾವಿನಕಾಯಿ ರಸ) ಅನ್ನು ಹಾಕಿ ಇವೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. 3 ಚಮಚ ಅಡುಗೆ ಎಣ್ಣೆಯನ್ನು ಒಗ್ಗರಣೆ ಬಾಂಡ್ಲಿಯಲ್ಲಿ ಬಿಸಿ ಮಾಡಿ. ಅದಕ್ಕೆ ಉದ್ದಿನಬೇಳೆ 2 ಒಣ ಮೆಣಸು ಸಾಸಿವೆ ಮತ್ತು ಹಸಿ ಮೆಣಸು, ಜಜ್ಜಿದ ಬೆಳ್ಳುಳ್ಳಿ 1 ಚಿಟಿಕೆ ಅರಿಶಿನ ಇವನ್ನು ಹಾಕಿ. ಸಾಸಿವೆ ಕಾಳು ಚಿಟಿಪಿಟಿ ಸದ್ದು ಮಾಡಲು ಶುರು ಮಾಡಿದಾಗ ಗ್ಯಾಸ್ ಬಂದು ಮಾಡಿ. ಬಿಸಿಯಾದ ಒಗ್ಗರಣೆಯನ್ನು  ಮೇಲೆ ಹೇಳಿದ ಪಾತ್ರೆಗೆ ಹಾಕಿಬಿಡಿ. (ಆಗ ಹೊರಬರುವ ಅದ್ಭುತವಾದ ಪರಿಮಳವನ್ನು ಆಘ್ರಾಣಿಸಲು ಮರೆಯಬೇಡಿ). ಎಲ್ಲವನ್ನು ಚೆನ್ನಾಗಿ ಕಲುಕಿ, ಉಪ್ಪು ಬೇಕಾದರೆ ಹಾಕಿದರೆ ಅಪ್ಪೆಹುಳಿ ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ